ಮಂಗಳೂರು: ರಾಜ್ಯದ ಜಾನಪದ ಕ್ರೀಡೆ ಕಂಬಳದಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಅಶ್ವತ್ಥಪುರ ಶ್ರೀನಿವಾಸ ಗೌಡ ಎಂಬುವವರು ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಅವರು ಕೋಣಗಳೊಂದಿಗೆ 142.50 ಮೀಟರ್ ಉದ್ದದ ಕೆರೆಯನ್ನು 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್ ಗೆ ಬದಲಾಯಿಸಿದರೆ 9.55 ಸೆಕೆಂಡ್ ಗಳಲ್ಲಿ ಓಡಿದಂತಾಗುತ್ತದೆ. ಈವರೆಗೆ ಕಂಬಳ ಕೆರೆಯಲ್ಲಿ ಇಷ್ಟು ವೇಗದಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ಇದಲ್ಲದೆ ಜಮೈಕಾದ ಉಸೇನ್ ಬೋಲ್ಟ್ ಟ್ರ‍್ಯಾಕ್ ನಲ್ಲಿ 9.58 ಸೆಕೆಂಡ್ ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿರುವ ಶ್ರೀನಿವಾಸಗೌಡ ಮೀರಿಸಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಂದ್ಹಾಗೆ ಮೂಡುಬಿದಿರೆ ಸಮೀಪದ ಮಿಜಾರು ನಿವಾಸಿ ಶ್ರೀನಿವಾಸ ಗೌಡ ಓದಿರುವುದು 10ನೇ ತರಗತಿ. ವಯಸ್ಸು 28. ವೃತ್ತಿಯಲ್ಲಿ ಕಟ್ಟಡ ಕಂಟ್ರಾಕ್ಟರ್
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...