ಲೋಕೇಶ್ ತಾಳಿಕಟ್ಟೆ | BEO ಆಫೀಸ್ TO ಮಿನಿಸ್ಟರ್ ವರೆಗೆ ಹಣ ಕೊಡಬೇಕು
ಬೆಂಗಳೂರು : RTE ಮರುವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು. ಹೀಗಾಗಿ ಹಣ ತೆಗೆದುಕೊಳ್ಳುವುದೇ ಬೇಡ ಅಂತ ಡಿಸೈಡ್ ಮಾಡಿದ್ದೇವೆ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಲೋಕೇಶ್ ತಾಳಿಕಟ್ಟೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ಮಾನ್ಯತೆ ನವೀಕರಣ ಅಂತ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ. ಇದರಿಂದ ನಾವು ಇಲಾಖೆಯಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇಲಾಖೆಯಿಂದ ಪ್ರತಿ ವರ್ಷ ರಿನಿವಲ್ ಮಾಡಬೇಕು, ಹಣ ಇಲ್ಲದೆ ಮಾನ್ಯತೆ ನವೀಕರಣ ಮಾಡಲ್ಲ. ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ಡ್ಯಾಕ್ಯುಮೆಂಟ್ಸ್ ಇದೆ. ಅಗ್ನಿ ಸುರಕ್ಷಿ ಹೆಸರಲ್ಲಿ ಹಣ ಪಿಕುತ್ತಿದ್ದಾರೆ, ಇದರಿಂದ ಬಜೆಟ್ ಶಾಲೆಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.
RTE ಮರುವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು. ಹೀಗಾಗಿ ಹಣ ತೆಗೆದುಕೊಡೋದೆ ಬೇಡ ಅಂತ ಡಿಸೈಡ್ ಮಾಡಿದ್ದೇವೆ. ಅಗ್ನಿ ಸುರಕ್ಷೆಯನ್ನು ಅನ್ ಲೈನ್ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದೇವೆ. ಆದ್ರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ. NOC ಪಡೆಯಲು ಪ್ರತಿ ಟೇಬಲ್ ಮೂವ್ ಆಗುತ್ತೆ. BEO ಆಫೀಸ್ TO ಮಿನಿಸ್ಟರ್ ವರೆಗೆ ಹಣ ಕೊಡಬೇಕು. ಪ್ರತಿ ಟೇಬಲ್ ಗೂ ಹಣ ಕೊಡಬೇಕು ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
ಖಾಸಗಿ ಶಾಲೆಗಳಿಂದ ಹಣ ವಸೂಲಿಗೆ ಸೃಷ್ಟಿ ಮಾಡಿರೋ ಸಮಸ್ಯೆಗಳ ಪಟ್ಟಿ
1 . RR( ಮಾನ್ಯತೆ ನವೀಕರಣ ) ನೀಡಲು ಲಕ್ಷಾಂತರ ಹಣ ಇಲಾಖೆಯ ಅಧಿಕಾರಿಗಳಿಗೆ ಕೊಡಬೇಕು
2. ಲಂಚ ಪಡೆಯಲು ಹೊಸ ಮಾರ್ಗ ಅನ್ವೇಷಣೆ ( ಅಗ್ನಿ ಸುರಕ್ಷತಾ ಪ್ರಮಾಣ ಪತ್ರಕ್ಕೆ )
3. RTE ಶುಲ್ಕ ಮರುಪಾವತಿ ಪಡೆಯಲು 30 ರಿಂದ 40 % ಲಂಚ ವಸೂಲಿ
4. ಅನ್ಯ ಪಠ್ಯಕ್ರಮ ಅನುಸರಿಸಲು NOC ಗಾಗಿ ಬಾರಿ ಭ್ರಷ್ಟಾಚಾರ
5. ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮೆ ಮಾಮೂಲಿ ವಸೂಲಿ
6 . ವರ್ಷಕ್ಕೊಮ್ಮೆ ವರ್ಗಾವಣೆಯ ದಂಧೆ
7. ಸರ್ಕಾರಿ ಶಾಲೆಗಳನ್ನು ಮರೆತಿರುವ ಶಿಕ್ಷಣ ಮಂತ್ರಿಗಳು
8 . ಧಾರ್ಮಿಕ ಸೂಕ್ಷ್ಮ ವಿಚಾರಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದು