ಹತ್ತು ಮಕ್ಕಳಿಗೆ ಜನ್ಮ ನೀಡುವ ತಾಯಿಗೆ ಆರ್ಥಿಕ ಪ್ರೋತ್ಸಾಹ – ವ್ಲಾಡಿಮಿರ್ ಪುಟಿನ್
ಕನಿಷ್ಠ ಹತ್ತು ಮಕ್ಕಳಿಗೆ ಜನ್ಮ ನೀಡುವ ತಾಯಂದಿರಿಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಜನಸಂಖ್ಯೆಯ ಬಿಕ್ಕಟ್ಟನ್ನು ಪರಿಹರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ವ್ಲಾಡಿಮಿರ್ ಪುಟಿನ್ ಜನಸಂಖ್ಯೆಯ ಕುಸಿತವನ್ನು ತಡೆಯುವ ಯೋಜನೆಯನ್ನ ರೂಪಿಸಿದ್ದು, ಅದಕ್ಕೆ ಮದರ್ ಹೀರೋಯಿನ್ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯಡಿ 10 ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ಆರ್ಥಿಕ ನೆರವು ನೀಡಲಾಗುವುದು. ಆದರೆ 10 ಮಕ್ಕಳು ಬದುಕಿರಬೇಕು. ಹತ್ತನೇ ಮಗುವಿಗೆ ಅವರ ಮೊದಲ ಹುಟ್ಟುಹಬ್ಬದಂದು 1 ಮಿಲಿಯನ್ ರೂಬಲ್ಸ್ಗಳನ್ನು (ಸುಮಾರು 13 ಲಕ್ಷ ರೂ.) ಪಾವತಿಸಲಾಗುವುದು ಎಂದಿದ್ದಾರೆ.
ಈ ವರ್ಷದ ಮಾರ್ಚ್‌ನಿಂದ, ದೈನಂದಿನ ಕರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಉಕ್ರೇನ್ ಮೇಲಿನ ಯುದ್ಧದಿಂದ ಸಾವಿನ ಸಂಖ್ಯೆ 50,000 ತಲುಪಿದೆ.
ಪುಟಿನ್ ಘೋಷಿಸಿರುವ ಮದರ್ ಹೀರೋಯಿನ್ ಯೋಜನೆ ಹತಾಶೆಯಲ್ಲಿ ಕೊನೆಯ ಪ್ರಯತ್ನವಾಗಿದೆ ಎಂದು ರಷ್ಯಾದ ರಾಜಕೀಯ ಮತ್ತು ಭದ್ರತೆಯ ಪರಿಣಿತರಾದ ಡಾ ಜೆನ್ನಿ ಮ್ಯಾಥರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಜನಸಂಖ್ಯಾ ಬಿಕ್ಕಟ್ಟನ್ನು ಪರಿಹರಿಸಲು ಇದನ್ನು ಜಾರಿಗೊಳಿಸಲಾಗುತ್ತಿದೆ. ದೊಡ್ಡ ಕುಟುಂಬಗಳು ಹೆಚ್ಚು ದೇಶಭಕ್ತಿ ಹೊಂದಿವೆ ಎಂದು ಪುಟಿನ್ ಹೇಳಿದ್ದಾರೆ. ಆದರೆ ಹಣಕಾಸಿನ ನೆರವಿಗೆ ನೀಡಿರುವ ಷರತ್ತು ವಿಚಿತ್ರವಾಗಿದೆ.








