ಉಕ್ರೇನ್ ರಷ್ಯ ಬಿಕ್ಕಟ್ಟು – ಯುದ್ದ ಭೂಮಿಯಲ್ಲಿ ಇಲ್ಲಿಯವರೆಗೆ ನಡೆದ ಅಪ್ಡೇಟ್…
- ಉಕ್ರೇನ್ನಲ್ಲಿ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ. ಇವುಗಳನ್ನು ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ನೀಡಿದವು.
- ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಉಕ್ರೇನಿಯನ್ ಸೇನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾಸ್ಕೋ ಮಾತುಕತೆಗೆ ಸಿದ್ಧವಾಗಿದೆ.
- ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ಈ ವಿಮಾನದಲ್ಲಿ ರಷ್ಯಾದ 150 ಪ್ಯಾರಾಟ್ರೂಪರ್ಗಳು ಇದ್ದರು. ಎಷ್ಟು ಮಂದಿ ಸತ್ತರು ಮತ್ತು ಎಷ್ಟು ಮಂದಿ ಬದುಕುಳಿದರು.. ಈ ಮಾಹಿತಿಯನ್ನು ಉಕ್ರೇನ್ ನೀಡಿಲ್ಲ.
- ರಷ್ಯಾದ ಪಡೆಗಳು ಕೀವ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ.
- ರಷ್ಯಾದ ಪಡೆಗಳು ಇಂದು ರಾತ್ರಿ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಯುದ್ಧಕ್ಕೆ ಧುಮುಕುವಂತೆ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ.
- ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ನಾಗರಿಕರು ಅಧಿಕಾರಿಗಳೊಂದಿಗೆ ಮಾತನಾಡದೆ ಗಡಿ ಪ್ರದೇಶಗಳಿಗೆ ಹೋಗುವುದನ್ನು ನಿಷೇಧಿಸಿದೆ.
- ಉಕ್ರೇನ್ಗೆ ಪ್ರಯಾಣಿಸುವ ನಾಗರಿಕರಿಗೆ ಲೆವೆಲ್-4 ಎಚ್ಚರಿಕೆಯ ಪ್ರಯಾಣ ಸಲಹೆಯನ್ನು ಅಮೆರಿಕಾ ನೀಡಿದೆ, ಇದರಲ್ಲಿ ನಾಗರಿಕರಿಗೆ ಸೂಕ್ಷ್ಮ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
- ಪುಟಿನ್ ಮತ್ತು ಅವರ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಬ್ರಿಟನ್ ಆದೇಶಿಸಿದೆ. ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ರಷ್ಯಾವನ್ನು SWIFT ಪಾವತಿ ವ್ಯವಸ್ಥೆಯಿಂದ ಹೊರತೆಗೆಯಲು ಕರೆ ನೀಡಿವೆ.
- ಇಂಟರ್ನ್ಯಾಷನಲ್ ನ್ಯೂಸ್ ಏಜೆನ್ಸಿ ಎಪಿ ಪ್ರಕಾರ, ಪಾಶ್ಚಿಮಾತ್ಯ ದೇಶಗಳೊಂದಿಗೆ ಯುದ್ಧ ಪ್ರಾರಂಭವಾದರೆ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸಹ ಬಳಸಬಹುದು. ಎಂದಿದೆ.
- ಫ್ರಾನ್ಸ್ ಉಕ್ರೇನ್ಗೆ 300 ಮಿಲಿಯನ್ ಯುರೋಗಳ ನೆರವು ಮತ್ತು ಮಿಲಿಟರಿ ಉಪಕರಣಗಳನ್ನು ಕಳುಹಿಸಲು ಮುಂದಾಯಿತು. ಯುರೋಪ್ನಲ್ಲಿರುವ ಪುಟಿನ್ ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು EU ಒಪ್ಪಿಕೊಂಡಿದೆ.








