ರಷ್ಯಾ ಉಕ್ರೇನ್ ಬಿಕ್ಕಟ್ಟು : ಯುದ್ಧದ 11 ದಿನದ ಅಪ್ಡೇಟ್ ಇಲ್ಲಿದೆ..
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇಂದು 11 ನೇ ದಿನಕ್ಕೆ ಕಾಲಿಟ್ಟಿದೆ. 11 ನೇ ದಿನ, ರಷ್ಯಾ ಉಕ್ರೇನ್‌ನ ಅನೇಕ ನಗರಗಳಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಖಾರ್ಕಿವ್ ನಗರದ ಹಲವಾರು ವಸತಿ ಪ್ರದೇಶಗಳ ಮೇಲೂ ದಾಳಿ ನಡೆಸಲಾಗಿದೆ.
ಪೋಲೆಂಡ್‌ನಲ್ಲಿ ಶಾಂತಿ ಒಪ್ಪಂದದ ಕುರಿತು ರಷ್ಯಾ ಮತ್ತು ಉಕ್ರೇನ್ ಮೂರನೇ ಸುತ್ತಿನ ಮಾತುಕತೆ ನಡೆಸಬಹುದು. ಮಾತುಕತೆಗೂ ಮುನ್ನ ಉಕ್ರೇನ್‌ನ ನಾಲ್ಕು ನಗರಗಳಲ್ಲಿ ರಷ್ಯಾ ಮತ್ತೆ ಕದನ ವಿರಾಮ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಈಶಾನ್ಯ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ “ಬೆಂಬಲ” ಕೋರಿದ್ದಾರೆ.
ಝೆಲೆನ್ಸ್ಕಿ ಜೊತೆ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಿತು.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ತೀವ್ರತೆ ಭಾರತದ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ . ಇಂದು ಬೆಳಿಗ್ಗೆ ಕುಸಿತದೊಂದಿಗೆ ಆರಂಭವಾಗಿದ್ದ ಮಾರುಕಟ್ಟೆ 5.91 ಲಕ್ಷ ಕೋಟಿ ಕುಸಿತದೊಂದಿಗೆ ವಹಿವಾಟು ಮುಗಿಸಿದೆ.
ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಯ ಮನವಿಯ ಮೇರೆಗೆ, ಅಮೆರಿಕಾ ಮತ್ತು ನ್ಯಾಟೋ ಭಾನುವಾರ 17,000 ಆಂಟಿ ಟ್ಯಾಂಕ್ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳ ರವಾನೆಯನ್ನು ಉಕ್ರೇನ್‌ಗೆ ಕಳುಹಿಸಿದವು
ಯುದ್ಧದಲ್ಲಿ ಜನರನ್ನು ಕೊಂದವರನ್ನು ನಾವು ಕ್ಷಮಿಸುವುದಿಲ್ಲ. ಯುದ್ಧದ ಸಮಯದಲ್ಲಿ ಮಾಡಿದ ದೌರ್ಜನ್ಯವನ್ನು ನಾವು ಮರೆಯುವುದಿಲ್ಲ. ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಈ ಯುದ್ಧದಲ್ಲಿ 11,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ವಿವಿಧ ರೀತಿಯ 999 ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸಲಾಗಿದೆ. 46 ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್ ರಷ್ಯಾದ 290 ಮಿಲಿಟರಿ ಟ್ಯಾಂಕ್‌ಗಳನ್ನು ನಾಶಪಡಿಸಿದೆ ಮತ್ತು ಮೂರು ಹಡಗುಗಳನ್ನು ನಾಶಪಡಿಸಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಉಕ್ರೇನ್‌ನಲ್ಲಿ ಓದುತ್ತಿರುವ 20 ಸಾವಿರ ವಿದ್ಯಾರ್ಥಿಗಳಲ್ಲಿ 16,000 ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. ಸುಮಾರು 3000 ಭಾರತೀಯರು ಪ್ರಸ್ತುತ ಉಕ್ರೇನ್‌ನ ನೆರೆಯ ದೇಶಗಳಲ್ಲಿದ್ದಾರೆ. ಸುಮಾರು 600 ವಿದ್ಯಾರ್ಥಿಗಳು ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಸ್ಥಳಾಂತರಿಸಲು ರಾಯಭಾರ ಕಚೇರಿ ವ್ಯವಸ್ಥೆ ಮಾಡುತ್ತಿದೆ.








