ರಷ್ಯಾ ಉಕ್ರೇನ್ ಬಿಕ್ಕಟ್ಟು – ಯುದ್ಧದ 14 ನೇ ದಿನದ ಅಪ್ಡೇಟ್ ಇಲ್ಲಿ…
- ರಷ್ಯಾದ ಪಡೆಗಳು ಉಕ್ರೇನ್ನ ಜೈವಿಕ ಸಂಶೋಧನಾ ಸೌಲಭ್ಯವನ್ನು ವಶಪಡಿಸಿಕೊಳ್ಳಲು ಬಯಸುತ್ತಿವೆ ಎಂದು ಅಮೆರಿಕಾ ಹೇಳಿಕೊಂಡಿದೆ.
2. ವಿಶ್ವಸಂಸ್ಥೆಯಲ್ಲಿ ರಷ್ಯಾದ ಮೇಲೆ ಹೆಚ್ಚಿನ ಒತ್ತಡ ಹೇರುವಲ್ಲಿ ಭಾರತವು ಪಾತ್ರ ವಹಿಸಬೇಕೆಂದು ಫ್ರಾನ್ಸ್ ರಾಷ್ಟ್ರ ಬಯಸಿದೆ.
3. ಪುಟಿನ್ ನಗರಗಳಲ್ಲಿ ಗೆಲ್ಲಲ್ಲು ಸಾಧ್ಯವಾಗುತ್ತದೆ, ಆದರೆ ಅವರು ಎಂದಿಗೂ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೊ ಬಿಡೆನ್ ಹೇಳಿದರು..
4. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ 474 ಜನರು ಸಾವನ್ನಪ್ಪಿದ್ದಾರೆ ಮತ್ತು 861 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
5. ರಷ್ಯಾದಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಅಮೆರಿಕಾ ನಿಲ್ಲಿಸಿದೆ. ಇದರಿಂದಾಗಿ ಅಮೆರಿಕದಲ್ಲಿ ಗ್ಯಾಸ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
6. ಮೆಕ್ಡೊನಾಲ್ಡ್ಸ್ ರಷ್ಯಾದಲ್ಲಿ ತನ್ನ ಎಲ್ಲಾ ರೆಸ್ಟೋರೆಂಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಕಂಪನಿಯ ಸಿಇಒ ಕ್ರಿಸ್ ಕೆಂಪ್ಜಿಂಕಿ ಪತ್ರದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
7. ರಷ್ಯಾಕ್ಕೆ ಸಹಾಯ ಮಾಡುತ್ತಿರುವ ಚೀನಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಅಮೆರಿಕ ಹೇಳಿದೆ.
8. EU ಉಕ್ರೇನ್ಗೆ $500 ಮಿಲಿಯನ್ ಮಾನವೀಯ ನೆರವು ಘೋಷಿಸಿದೆ.
9. ನಾಗರಿಕರನ್ನು ಸ್ಥಳಾಂತರಿಸಲು ಇರ್ಪಿನ್ನಲ್ಲಿರುವ ಇವಾಕ್ಯುಯೇಶನ್ ಕಾರಿಡಾರ್ ಅನ್ನು ರಷ್ಯಾ ಗುರಿಯಾಗಿಸುತ್ತಿದೆ ಎಂದು ಬ್ರಿಟಿಷ್ ರಕ್ಷಣಾ ಸಚಿವಾಲಯ ಆರೋಪಿಸಿದೆ.
10 ವಿದೇಶಿ ವ್ಯಾಪಾರದಲ್ಲಿ ರಷ್ಯಾದ ಭದ್ರತೆಯನ್ನು ಹೆಚ್ಚಿಸಲು ಪುಟಿನ್ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಇದರೊಂದಿಗೆ, ಸರ್ಕಾರವು ರಷ್ಯಾ ದೇಶದಿಂದ ರಫ್ತು ಮತ್ತು ವಿದೇಶದಿಂದ ಆಮದನ್ನು ನಿಷೇಧಿಸಲು ಸಾಧ್ಯವಾಗುತ್ತದೆ.








