ರಷ್ಯಾ – ಉಕ್ರೇನ್ ಬಿಕ್ಕಟ್ಟು: ಯುದ್ಧದ 68 ದಿನ ಡ್ರೋನ್ ಬಳಸಿ ರಷ್ಯಾದ ದೋಣಿ ಉರುಳಿಸಿದ ಉಕ್ರೇನ್
ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 68 ನೇ ದಿನ. ಕಪ್ಪು ಸಮುದ್ರದಲ್ಲಿ ರಷ್ಯಾದ ಎರಡು ರಾಪ್ಟರ್ ವರ್ಗದ ದೋಣಿಗಳನ್ನು ಡ್ರೋನ್ ಮೂಲಕ ನಾಶಪಡಿಸಿದ್ದೇವೆ ಎಂದು ಉಕ್ರೇನಿಯನ್ ಮಿಲಿಟರಿ ಹೇಳಿಕೊಂಡಿದೆ. ಅದೇ ಸಮಯದಲ್ಲಿ, 24 ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಹ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಹೇಳಿಕೊಂಡಿದೆ.
#Ukraine️ A Ukrainian drone (turkish-made) Bayraktar destroyed two russian raptor-type boats off Zmeiny Island. pic.twitter.com/r0y8wGSFq4
— Igor Garik (@IgorGarik5) May 2, 2022
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶ್ವಾಸಾರ್ಹ ಸೇನಾ ಮುಖ್ಯಸ್ಥ ಜನರಲ್ ವ್ಯಾಲೆರಿ ಗೆರಾಸಿಮೊವ್ ಕೂಡ ಗಾಯಗೊಂಡಿದ್ದಾರೆ. ವೇಗವಾಗಿ ಯಶಸ್ಸನ್ನು ಸಾಧಿಸುವ ಉದ್ದೇಶದಿಂದ ಪುಟಿನ್, ಜನರಲ್ ವ್ಯಾಲೆರಿ ಗೆರಾಸಿಮೊವ್ ಅವರನ್ನು ಖಾರ್ಕಿವ್ ಮುಂಭಾಗದಲ್ಲಿ ನೇಮಿಸಿದ್ದರು.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಎರೆಸ್ಟೊವಿಚ್, ರಷ್ಯಾದ ಮೇಜರ್ ಜನರಲ್ ಆಂಡ್ರೇ ಸಿಮೊನೊವ್ ಕೂಡ ಖಾರ್ಕಿವ್ ನಗರದಲ್ಲಿ ನಿಧನರಾಗಿದ್ದಾರೆ ಎಂದು ಮಿಲಿಟರಿ ಹೇಳಿದೆ. ಇದುವರೆಗೆ ಉಕ್ರೇನ್‌ನಲ್ಲಿ ರಷ್ಯಾದ 9 ಉನ್ನತ ಕಮಾಂಡರ್‌ಗಳು ಹತರಾಗಿದ್ದಾರೆ.