ಉಕ್ರೇನ್, ನ್ಯಾಟೊ ಒಕ್ಕೂಟ ಸೇರಲು ಮುಂದಾಗಿದ್ದನ್ನು ವಿರೋಧಿಸಿ ರಷ್ಯಾ ಫೆಬ್ರುವರಿ 24ರಿಂದ ಹಿಡಿದು ಇಲ್ಲಿಯ ವರೆಗೂ ದಾಳಿ ನಡೆಸುತ್ತಿದೆ. ಈ ಯುದ್ಧದಲ್ಲಿ ಅದೆಷ್ಟೋ ಜೀವನಗಳು ಹೋಗಿವೆ..
ಆದ್ರೀಗ 27 ಸದಸ್ಯ ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಯೂರೋಪಿಯನ್ ಕಮಿಷನ್ ಉಕ್ರೇನ್ ಅನ್ನು ಶಿಫಾರಸು ಮಾಡಿದ ಬೆನ್ನಲ್ಲೇ , ರಷ್ಯಾ ಹೇಳಿಕೆ ಚರ್ಚೆಯಾಗ್ತಿದೆ..
ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುತ್ತಿರುವುದಕ್ಕೆ ರಷ್ಯಾ ವಿರೋಧವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಆರ್ಥಿಕ ಒಕ್ಕೂಟಕ್ಕೆ ಸೇರುವುದು ಅವರ ಪರಮಾಧಿಕಾರವಾಗಿದೆ. ಇದು ಅವರ ಉದ್ಯಮಕ್ಕೆ ಸಂಬಂಧಿಸಿದ ವಿಚಾರ ಎಂದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ರಷ್ಯಾದ ವಾರ್ಷಿಕ ಆರ್ಥಿಕ ಸಮ್ಮೇಳನದಲ್ಲಿ ಪುಟಿನ್ ಅವರು ಹೇಳಿದ್ದಾರೆ.
ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವ ನಿರ್ಧಾರವು ತಮ್ಮ ಭದ್ರತೆಗೆ ಧಕ್ಕೆ ಎಂದು ರಷ್ಯಾ ಭಾವಿಸಿತ್ತು. ಆದರೆ, ಅವರ ಆರ್ಥಿಕ ಏಕೀಕರಣಕ್ಕೆ ಸಂಬಂಧಿಸಿದ ನಿರ್ಧಾರವು ಅವರ ಆಯ್ಕೆಯಾಗಿದೆ’ಎಂದು ಪುಟಿನ್ ಹೇಳಿದರು.