ಉಕ್ರೇನ್ – ರಷ್ಯಾ ಬಿಕ್ಕಟ್ಟು : ಯುದ್ಧದ 6 ನೇ ದಿನದ ಅಪ್ಡೇಟ್ ಇಲ್ಲಿದೆ….
1 ಮಂಗಳವಾರ ಬೆಳಗ್ಗೆ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
2 ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳು ತಿಳಿಸಿವೆ.
3 ಉಕ್ರೇನ್‌ನಿಂದ ಆಗಮಿಸುವ ಕರ್ನಾಟಕ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡಲು ಮುಂಬೈ ಮತ್ತು ನವದೆಹಲಿಯಲ್ಲಿ ತಲಾ ಒಬ್ಬರಂತೆ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.
4 ರಷ್ಯಾ ಉಕ್ರೇನ್‌ನಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಲು ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್ ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ರಷ್ಯಾ ನಿರ್ವಾತ (ವಾಕ್ಯೂಂ) ಬಾಂಬ್‌ಗಳನ್ನು ಬೀಳಿಸುವ ಮೂಲಕ ವಿನಾಶವನ್ನು ಉಂಟುಮಾಡುತ್ತಿದೆ.
5 ರಷ್ಯಾ – ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಮವಾರ ಬೆಲಾರಸ್‌ನಲ್ಲಿ ಉಭಯ ದೇಶಗಳ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಈ ಮಧ್ಯೆ ರಷ್ಯಾ ಕೂಡ ಪರಮಾಣು ಯುದ್ಧಕ್ಕೆ ಸಿದ್ಧತೆ ಆರಂಭಿಸಿದೆ.
6 64 ಕಿಮೀ ಉದ್ದದ ರಷ್ಯಾದ ಮಿಲಿಟರಿ ಬೆಂಗಾವಲು ಪಡೆ ಉಕ್ರೇನ್ ರಾಜಧಾನಿ ಕೈವ್ ಕಡೆಗೆ ಚಲಿಸುತ್ತಿದೆ. ಇದರ ಉಪಗ್ರಹ ಫೋಟೋಗಳನ್ನೂ ಬಿಡುಗಡೆ ಮಾಡಲಾಗಿದೆ.
7 ಉಕ್ರೇನ್‌ನಲ್ಲಿನ ಮಾನವೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಔಷಧಗಳು ಸೇರಿದಂತೆ ತಕ್ಷಣದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ನಿರ್ಧರಿಸಿದೆ. ಇವುಗಳನ್ನು ಬುಧವಾರ ಉಕ್ರೇನ್ ಜನರಿಗೆ ಕಳುಹಿಸಲಾಗುವುದು.
8 ಭಾರತ ಯಾವಾಗಲೂ ವಿವಾದಗಳ ಶಾಂತಿಯುತ ಪರಿಹಾರದ ಬಗ್ಗೆ ಮಾತನಾಡುತ್ತದೆ ರಾಜತಾಂತ್ರಿಕತೆಯ ಹಾದಿಗೆ ಮರಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಭಾರತ ಸರ್ಕಾರ ವಿಶ್ವಸಂಸ್ಥೆಯಲ್ಲಿ ಹೇಳಿದೆ.
9 ಕೇಂದ್ರದ ಆಪರೇಷನ್ ಗಂಗಾದ ಭಾಗವಾಗಿ ಏಳನೇ ವಿಮಾನದ ಮೂಲಕ ಉಕ್ರೇನ್‌ನಿಂದ 182 ಭಾರತೀಯ ನಾಗರಿಕರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ.
10 ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕ್ಕೆ ಅಮೆರಿಕಾ ನೀತಿಗಳು ಕಾರಣವೆಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಕಳೆದ ವಾರ ಯುದ್ಧವನ್ನು ಕೊನೆಗೊಳಿಸಲು ಕರೆ ನೀಡಿದ್ದರು…