ಡಿವೋರ್ಸ್ ಗಾಗಿ ಪತ್ನಿಗೆ 52 ಸಾವಿರ ಕೋಟಿ ರೂ. ಜೀವನಾಂಶ ನೀಡುತ್ತಿರುವ ವ್ಲಾದಿಮಿರ್..!
ರಷ್ಯಾದ : ರಷ್ಯಾದ ಎರಡನೇ ಶ್ರೀಮಂತನಾದ ಮಾಸ್ಕೋ ವ್ಲಾದಿಮಿರ್ ಪೊಟಾನಿನ್ ತಾವು ಡಿವೋರ್ಸ್ ನೀಡಿದ ಪತ್ನಿಗೆ ಒಟ್ಟು 52 ಸಾವಿರ ಕೋಟಿ ರೂ. ಜೀವನಾಂಶ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ..
ಲಂಡನ್ ನ್ಯಾಯಾಲಯದಲ್ಲಿ ವಿಚ್ಛೆದನ ಕುರಿತು ಅರ್ಜಿ ವಿಚಾರಣೆ ವೇಳೆ ಪೊಟಾನಿನ್ ಮಾಜಿ ಪತ್ನಿ ನತಾಲಿಯಾ ಪೊಟಾನಿನಾ ಅವರು ಎಂಎಂಸಿ ನಾರಿಲಸ್ಕ್ ನಿಕೆಲ್ ಪಿಜೆಎಸ್ ಕಂಪನಿಯ ಶೇ.50ರಷ್ಟು ಷೇರನ್ನು ಪರಿಹಾರವಾಗಿ ನೀಡಬೇಕೆಂದು ಬೇಡಿಯಿಟ್ಟಿದ್ದಾರೆ. ಅಲ್ಲದೇ ಪೊಟಾನಿನ್ ತನ್ನ ಆಸ್ತಿ ಗಳಿಕೆಯ ಅರ್ಧದಷ್ಟು ಜೀವನಾಂಶವನ್ನು ನೀಡಲು ಕೂಡ ಸಿದ್ಧರಿದ್ದಾರೆ.
ಪೊಟಾನಿನ್ ಲಂಡನ್ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಈ ಮೂಲಕ ಬೆಜೋಸ್ ಮತ್ತು ಬಿಲ್‌ಗೇಟ್ಸ್ ನಂತರ ಇಷ್ಟು ದೊಡ್ಡ ಮೊತ್ತದ ಜೀವನಾಂಶ ನೀಡುವ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿಕೊಳ್ಳಲಿದ್ದಾರೆ.
ಅಪಘಾತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿಗೆ ರವಾನೆ….
‘ಅಬ ಜಬ ದಬ’ದಲ್ಲಿ ಬಿಗ್ ಸ್ಕ್ರೀನ್ ಮೇಲೆ ಮತ್ತೆ ಶಂಕರ್ ನಾಗ್ ದರ್ಶನ ..!
ವಸತಿ ರಹಿತ ಗ್ರಾಮೀಣ ಜನತೆ ಕೇಂದ್ರದ ಸಿಹಿ ಸುದ್ದಿ….







