Russia vs ukraine | ಹೊಸ ದಾಖಲೆ ಬರೆದ ತೈಲ
ರಷ್ಯಾ -ಉಕ್ರೇನ್ ನಡುವೆ ಯುದ್ಧ ಹಿನ್ನೆಲೆ
ಕಚ್ಚಾತೈಲದ ಬೆಲೆ ಶೇಕಡಾ 9 ರಷ್ಟು ಏರಿಕೆ
ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 130 ಡಾಲರ್
ಲೀಟರ್ ಪೆಟ್ರೋಲ್ ಗೆ 12 ರಿಂದ 22 ರೂ. ಏರಿಕೆ ಸಾಧ್ಯತೆ
ಮುಂಬೈ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಪರಿಣಾಮ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಇಡೀ ವಿಶ್ವದ ಮೇಲೆ ಬೀರುತ್ತಿದೆ.
ಯುದ್ಧದ ಪರಿಣಾಮ ಭಾರತದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನದತ್ತ ಮುಖ ಮಾಡಿವೆ.
ಇದರ ಮುಂದುವರೆದ ಭಾಗವಂತೆ ಇದೀಗ ಪೆಟ್ರೋಲ್, ಡಿಸೇಲ್ ಬೆಲೆಯೂ ಆಕಾಶ ಮುಟ್ಟುವ ಸಾಧ್ಯತೆಗಳಿವೆ.
ರಷ್ಯಾ -ಉಕ್ರೇನ್ ನಡುವೆ ಯುದ್ಧ ಮುಂದುವರೆದ ಹಿನ್ನೆಲೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಕಚ್ಚಾತೈಲದ ಬೆಲೆ ಶೇ. 9 ರಷ್ಟು ಏರಿಕೆ ಕಂಡಿದೆ.
ಪರಿಣಾಮ ಬ್ಯಾರೆಲ್ ಕಚ್ಚಾತೈಲದ ಬೆಲೆ 130 ಡಾಲರ್ ಗೆ ತಲುಪಿದೆ. ಇದರೊಂದಿಗೆ ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 130 ಡಾಲರ್ ಗೆ ತಲುಪಿದೆ.
ಹೀಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುವ ನಿರೀಕ್ಷೆಯಿದೆ.
ಇಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಕೊನೆ ಹಂತದ ಮತದಾನ ಮುಗಿಯುತ್ತಿದ್ದಂತೆ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಅಂದಾಜಿಸಲಾಗಿದೆ.
ಮೂಲಗಳ ಪ್ರಕಾರ ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲೀಟರ್ಗೆ 12 ರಿಂದ 22 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. russia-vs-ukraine-Brent crude nears $140 close to all-time high









