Russian Citizen death : ಒಡಿಶಾದಲ್ಲಿ ಮತ್ತೊಬ್ಬ ವಿದೇಶಿ ಪ್ರಜೆ ಸಾವು : 15 ದಿನಗಳಲ್ಲಿ ಇದು 3 ನೇ ಕೇಸ್
ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಅಸಹಜವಾಗಿ ಸಾವನಪ್ಪಿದ್ದು 15 ದಿನಗಳಲ್ಲಿ ಮೂರನೇ ಕೇಸ್ ಇದಾಗಿದೆ..
ಜಗತ್ ಸಿಂಗಾಪುರ ಜಿಲ್ಲೆಯ ಪಾರಾದಿಪ್ ಬಂದರಿನಲ್ಲಿ ಸರಕು ಹಡಗಿನಲ್ಲಿ ರಷ್ಯಾದ ಪ್ರಜೆ 51 ವರ್ಷದ ಸೆರ್ಗಿ ಮಿಲ್ಯಕೋವ್ (51) ಶವವಾಗಿ ಪತ್ತೆಯಾಗಿದ್ದಾರೆ.&
ಹೃದಯಾಘಾತದಿಂದ ಆತ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಸೆರ್ಗಿ ಮಿಲ್ಯಕೋವ್ ಸರಕು ಸಾಗಣೆ ಹಡಗಿನ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ರಷ್ಯಾದ ಸಂಸದ ಪಾವೆಲ್ ಆ್ಯಂಥವ್ ಹಾಗೂ ವಕೀಲ ವಾಡ್ಲಿಮಿರ್ ಬಿದೆವೊ ಅವರು ರಾಯಗಡದ ಹೋಟೆಲೊಂದರಲ್ಲಿ ಈಚೆಗೆ ಅಸಹಜವಾಗಿ ಸಾವಿಗಿಡಾಗಿದ್ದರು. ಪಾವೆಲ್ ಅವರು ಕೂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಟೀಕಾಕಾರರಾಗಿದ್ದರು.
ಹೀಗಾಗಿ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ..








