ರಷ್ಯಾ – ಉಕ್ರೇನ್ ಬಿಕಟ್ಟು: ಟಾಪ್ 10 ಸುದ್ದಿಗಳು…
ಯುದ್ಧದ ವಿರುದ್ಧ ಮಾತನಾಡುತ್ತಿರುವ ರಷ್ಯನ್ನರಿಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧನ್ಯವಾದ ಅರ್ಪಿಸಿದ್ದಾರೆ.
ಸ್ಲೋವಾಕ್ ರಿಪಬ್ಲಿಕ್ನಲ್ಲಿರುವ ಭಾರತದ ರಾಯಭಾರ ಕಚೇರಿಯು ಉಕ್ರೇನ್ನಲ್ಲಿರುವ ಭಾರತೀಯರಿಗೆ ಸ್ಲೋವಾಕಿಯಾ ಮೂಲಕ ಸ್ಥಳಾಂತರವಾಗುವಂತೆ ಸಲಹೆ ನೀಡಿದೆ.
ಉಕ್ರೇನ್ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಯೋಜನೆಯನ್ನು ಜೆಕ್ ರಿಪಬ್ಲಿಕ್ ಅನುಮೋದಿಸಿದೆ.
ರಷ್ಯಾದ ಪಡೆಗಳು ಮುನ್ನುಗ್ಗುತ್ತಲೆ ಇವೆ. ಉಕ್ರೇನ್ ರಾಜಧಾನಿ ಕೈವ್ ನಿಂದ 30 ಕಿಮೀ ದೂರದಲ್ಲಿ ರಷ್ಯಾ ಪಡಗಳಿವೆ ಎಂದು ಯುಕೆ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಕ್ರೇನ್ನಲ್ಲಿ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ. ಇವುಗಳನ್ನು ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ನೀಡಿದವು.
ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಉಕ್ರೇನಿಯನ್ ಸೇನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾಸ್ಕೋ ಮಾತುಕತೆಗೆ ಸಿದ್ಧವಾಗಿದೆ.
ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ಈ ವಿಮಾನದಲ್ಲಿ ರಷ್ಯಾದ 150 ಪ್ಯಾರಾಟ್ರೂಪರ್ಗಳು ಇದ್ದರು. ಎಷ್ಟು ಮಂದಿ ಸತ್ತರು ಮತ್ತು ಎಷ್ಟು ಮಂದಿ ಬದುಕುಳಿದರು.. ಈ ಮಾಹಿತಿಯನ್ನು ಉಕ್ರೇನ್ ನೀಡಿಲ್ಲ.
ರಷ್ಯಾದ ಪಡೆಗಳು ಕೀವ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ.
ರಷ್ಯಾದ ಪಡೆಗಳು ಇಂದು ರಾತ್ರಿ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಲಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಯುದ್ಧಕ್ಕೆ ಧುಮುಕುವಂತೆ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ.