ಯುದ್ಧದ 3ನೇ ದಿನ – ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯ ದಾಳಿ…
ಯುದ್ಧದ ಮೂರನೇ ದಿನವಾದ ಇಮದು ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮೇಲೆ ಪ್ರಬಲ ದಾಳಿ ಆರಂಭಿಸಿದೆ. ಅನೇಕ ವಸತಿ ಕಟ್ಟಡಗಳನ್ನ ಸ್ಪೋಟಿಸಿ ಹಾನಿಯನ್ನುಂಟುಮಾಡಿದೆ. ರಷ್ಯಾ ಈ ಮೊದಲು ಮೆಲಿಟೊಪೋಲ್ ನಗರವನ್ನು ಆಕ್ರಮಿಸಿಕೊಂಡಿತ್ತು.
ಏತನ್ಮಧ್ಯೆ, 3,500 ರಷ್ಯಾದ ಸೈನಿಕರು, 02 ಟ್ಯಾಂಕ್‌ಗಳು, 14 ವಿಮಾನಗಳು ಮತ್ತು 8 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯ ವಿರುದ್ಧ ಹೋರಾಡಲು ಅಮೆರಿಕಾ $ 600 ಮಿಲಿಯನ್ ಭದ್ರತಾ ನೆರವನ್ನು ಉಕ್ರೇನ್‌ಗೆ ಘೋಷಿಸಿದೆ.
ಇದಕ್ಕೂ ಮೊದಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ರಷ್ಯಾದ ವಿರುದ್ಧ ಖಂಡನೆ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯದ ಪರವಾಗಿ 11 ಮತಗಳು ಮತ್ತು ವಿರೋಧವಾಗಿ 1 ಮತಗಳು ಬಿದ್ದವು. ಭಾರತ, ಚೀನಾ ಮತ್ತು ಯುಎಇ ಮತದಾನದಲ್ಲಿ ಭಾಗವಹಿಸಲಿಲ್ಲ. ಆದಾಗ್ಯೂ, ವೀಟೋ ಅಧಿಕಾರವನ್ನು ಬಳಸಿಕೊಂಡು ರಷ್ಯಾ ಈ ಖಂಡನಾ ನಿರ್ಣಯವನ್ನು ತಿರಸ್ಕರಿಸಿತು.
Russians, look what your army is doing, this is a residential building!!! PUTIN STOP!#UkraineUnderAttack, #RussiaUkraineWar, #Ukraine pic.twitter.com/u7i56EBCzV
— Timur (@t_bdgv) February 26, 2022
Evacuation of civilians after a Russian cruise missile hit a residential building.
PUTIN STOP YOUR WAR CRIMES!#UkraineUnderAttack, #RussiaUkraineWar, #Ukraine pic.twitter.com/T70F3Q8I4T— Timur (@t_bdgv) February 26, 2022








