ರುತುರಾಜ್ ಟೀಂ ಇಂಡಿಯಾದಲ್ಲಿ ‘ವಂಡರ್ಸ್’ ಸೃಷ್ಟಿಸಬಲ್ಲ Ruthuraj saaksha tv
ಟೀಂ ಇಂಡಿಯಾದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಬಗ್ಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನವರಿ 19ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಸೆಣಸಾಡಲಿದೆ.
ಈ ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟ ಮಾಡಿದ್ದು, ಕೆ.ಎಲ್.ರಾಹುಲ್ ಗೆ ನಾಯಕತ್ವ ವಹಿಸಿದೆ.
ಹಾಗೇ ದೇಶಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಿಲಾಗಿದೆ.
ಈ ಬಗ್ಗೆ ಮಾತನಾಡಿರುವ ಚೇತನ್ ಶರ್ಮಾ, ರುತುರಾಜ್ ಗಾಯಕ್ವಾಡ್ ಟೀಂ ಇಂಡಿಯಾದಲ್ಲಿ ಅದ್ಭುತಗಳನ್ನು ಮಾಡಬಲ್ಲರು.
ಐಪಿಎಲ್, ವಿಜಯ್ ಹಜಾರೆ ಟ್ರೋಫಿ ಹೀಗೆ ಎಲ್ಲಾ ಟೂರ್ನಿಗಳಲ್ಲಿ ತಮ್ಮದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ. ಹಾಗೇ ಬ್ಯಾಟರ್ ಆಗಿ ಶತಕಗಳನ್ನು ಸಿಡಿಸಿ ಮಿಂಚಿದರು.
ಈ ಎಲ್ಲಾ ಕಾರಣಗಳಿಂದ ಅವರು ಈಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಆಗಿದ್ದಾರೆ. ಅವರ ಅವಶ್ಯಕತೆ ಟೀಂ ಇಂಡಿಯಾಗೆ ಇದೆ.
ರುತುರಾಜ್ ಭವಿಷ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿ ಮಿಂಚುತ್ತಾರೆ. ಆರಂಭಿಕರಾಗಿ ಅವರನ್ನ ಕಣಕ್ಕೀಳಿಸಿದರೇ ಉತ್ತಮ ಫಲಿತಾಂಶ ಹೊರಬರಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬ್ಯಾಟ್ ಬೀಸಿದ ರುತುರಾಜ್ ಗಾಯಕ್ವಾಡ್, ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
16 ಮ್ಯಾಚ್ ಗಳಲ್ಲಿ 635 ರನ್ ಗಳಿಸಿ ಆರೆಂಜ್ ತಮ್ಮದಾಗಿಸಿಕೊಂಡಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವರೂಪ ಪ್ರದರ್ಶಿಸಿದ ರುತುರಾಜ್, ಐದು ಮ್ಯಾಚ್ ಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸಿ ಹೌರಾ ಎನಿಸಿದರು.
ಅಲ್ಲದೇ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿ ಉಳಿದರು. ಒಟ್ಟಾರೆ ಐದು ಮ್ಯಾಚ್ ಗಳಲ್ಲಿ ರುತುರಾಜ್ 603 ರನ್ ಗಳಿಸಿದ್ದಾರೆ.
ಅಂದಹಾಗೆ ರುತುರಾಜ್ ಗಾಯಕ್ವಾಡ್ ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಟಿ 20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.









