S R Hiremath | ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಬಿಡಬೇಕು
ಧಾರವಾಡ : 2-3 ದಶಕಗಳಲ್ಲಿ ಸ್ವಾಮಿಗಳು, ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ ಬೆಳೆಯುತ್ತಿದೆ, ಇದು ವಿಪರ್ಯಾಸದ ಸಂಗತಿ ಎಂದು ಎಸ್ ಆರ್ ಹಿರೇಮಠ ಹೇಳಿದ್ದಾರೆ.
ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಧಾರವಾಡದಲ್ಲಿ ಮಾತನಾಡಿದ ಹಿರೇಮಠ, 2-3 ದಶಕಗಳಲ್ಲಿ ಅಪವಿತ್ರ ಮೈತ್ರಿ ಬೆಳೆಯುತ್ತಿದೆ, ಇದು ಒಳ್ಳೆ ಬೆಳವಣಿಗೆ ಅಲ್ಲ. ಸಂವಿಧಾನ ಮೌಲ್ಯಗಳಿಗೆ ಇದು ಅಪಾಯಕಾರಿ. ಇಂಥ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಎಂದು ಹೇಳಿದರು.

ಪೊಲೀಸರು ತಡವಾಗಿ ಸ್ವಾಮೀಜಿ ಬಂಧಿಸಿದರು, ಇಂಥ ಲೋಪಗಳು ಆಗಬಾರದು. ಸ್ವಾಮಿಗಳು ಆಧ್ಯಾತ್ಮದತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜಕಾರಣದ ಬಗ್ಗೆ ಕೆಲಸ ಮಾಡಬಾರದು, 12 ನೇ ಶತತಮಾನದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಶರಣರು ಯತ್ನಿಸಿದರು, ಶರಣರು ಸಾಕಷ್ಟು ಕೆಲಸ ಮಾಡಿದರು. ಬಸವ ಪ್ರಶಸ್ತಿ ಘೋಷಿಸಿದ್ದು ಇದೇ ಮುರುಘಾ ಮಠ ಆದರೆ ಇವತ್ತು ಅಲ್ಲಿ ಇಂಥ ಕೆಲಸ ನಡೆದಿದೆ. ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಬಿಡಬೇಕು. ಬಿ.ಎಸ್.ವೈ. ನಾಚಿಕೆ ಇಲ್ಲದೇ ಅನುದಾನ ಕೊಟ್ಟರು, ಎಲ್ಲ ಮಠಗಳಿಗೆ ಅನುದಾನ ಕೊಟ್ಟರು, ಇದು ಮಾಡಬಾರದ ಮಹಾಪರಾಧ ಇಂಥದ್ದನ್ನು ಯಾರು ಕೂಡ ಮಾಡಬಾರದು ಎಂದು ಹೇಳಿದರು.