S R Vishwanath | ಎಸ್.ಆರ್.ವಿಶ್ವನಾಥ್ ಗೆ ಮೊಟ್ಟೆ ಎಸೆತ.. ಆದ್ರೆ
ನೆಲಮಂಗಲ : ಶಾಸಕ ಎಸ್ ಆರ್ ವಿಶ್ವನಾಥ್ ಗೆ ಮೊಟ್ಟೆ ಎಸೆಯಲಾಗಿದ್ದು, ಸ್ವಲ್ಪದರಲ್ಲೆ ಮಿಸ್ ಆಗಿದೆ.
ಕಳೆದ ಭಾನುವಾರ ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ನನ್ನ ಕ್ಷೇತ್ರದಲ್ಲಿ ನಾನು ಮೊಟ್ಟೆಗೆ ಹೆದರುವುದಿಲ್ಲ. ಏನಿದ್ದರೂ ಬಾಂಬ್ ಗೆ ಹೆದರುತ್ತೇನೆ.
ತಾಕತ್ ಇದ್ರೆ ನನ್ ಮುಂದೆ ಬಂದು ಎಸೆಯಲಿ ಎಂದು ಸವಾಲು ಹಾಕಿದರು. ಮೊಟ್ಟೆ ಎಸೆದ ಮೇಲೆ ನನಗೆ ಹೇಳಿದ್ರು ಮೊಟ್ಟೆ ಅಲ್ಲಿ ಬಿದ್ದಿತ್ತು ಅಂತಾ.
ಅಲ್ಲಿಯವರೆಗೂ ನನಗೂ ಗೊತ್ತಿರಲಿಲ್ಲ, ಮೊಟ್ಟೆ ಎಸೆದಿದ್ದಾರೆ ಅಂತಾ. ಇದು ಯಾರೋ ಹೇಡಿಗಳು ಮಾಡಿರುವ ಕೆಲಸ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರ ರೀತಿ ನನಗೆ ಹೆಚ್ಚುವರಿ ಗನ್ ಮ್ಯಾನ್‌ಗಳು ಬೇಡ. ನಾನಂತು ಹೆದರುವುವನಲ್ಲ, ನನ್ನ ಮೇಲೆ ಮೊಟ್ಟೆ ಬಿದ್ದಿಲ್ಲ. ಪೊಲೀಸರ ಮೇಲೆ ಮೊಟ್ಟೆ ಬಿತ್ತು ಅಂತ ಹೇಳಿದ್ರು ಎಂದು ವಿವರಣೆ ನೀಡಿದ್ದಾರೆ.