Aakash Chopra | ಚಹಾಲ್ ಬೌಲಿಂಗ್ ಬಗ್ಗೆ ಆಕಾಶ್ ಚೋಪ್ರಾ ಟೀಕೆ
ಮೂರನೇ ಟಿ 20 ಪಂದ್ಯಕ್ಕೂ ಮುನ್ನಾಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಫಾರ್ಮ್ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಈವರೆಗೂ ಎರಡು ಪಂದ್ಯಗಳನ್ನಾಡಿರುವ ಚಹಾಲ್, ಬರೋಬ್ಬರಿ 75 ರನ್ ಗಳನ್ನು ನೀಡಿ ಒಂದೇ ಒಂದು ವಿಕೆಟ್ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ಈ ಸೀರಿಸ್ ನಲ್ಲಿ ಮಿಡಲ್ ಓವರ್ ನಲ್ಲಿ ಭಾರತ ತಂಡ ವಿಕೆಟ್ ಪಡೆಯದೇ ಇರೋದು ದೊಡ್ಡ ಸಮಸ್ಯೆಯಾಗಿದೆ. ಅನುಭವ ಇರುವ ಯಜುವೇಂದ್ರ ಚಹಾಲ್ ಕೂಡ ವಿಫಲರಾಗುತ್ತಿದ್ದಾರೆ.
ಕಳೆದ ಬಾರಿಯ ವಿಶ್ವಕಪ್ ಗೆ ಚಹಾಲ್ ಅವರನ್ನ ಆಯ್ಕೆ ಮಾಡದೇ ಇದ್ದಾಗ ಆಯ್ಕೆಗಾರರ ಬಗ್ಗೆ ಸಾಕಷ್ಟು ಮಂದಿ ಟೀಕೆ ಮಾಡಿದರು.

ಆದ್ರೆ ನಿಜ ಹೇಳಬೇಕೆಂದರೇ ಆ ಸಂದರ್ಭದಲ್ಲಿ ಚಹಾಲ್, ಅಂತರಾಷ್ಟ್ರೀಯ ಪಂದ್ಯದಲ್ಲಿ ಹೆಚ್ಚು ರನ್ ಗಳನ್ನು ನೀಡುತ್ತಿದ್ದರು.
ಅದಕ್ಕಾಗಿಯೇ ಅವರನ್ನ ಟಿ 20 2021ರ ವಿಶ್ವಕಪ್ ಗೆ ಆಯ್ಕೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಕಟಕ್ ಪಂದ್ಯದ ಪವರ್ ಪ್ಲೇ ನಲ್ಲಿ ಮೂರು ವಿಕೆಟ್ ಗಳನ್ನು ಪಡೆದು ಟೀಂ ಇಂಡಿಯಾಗೆ ಭುವಿ ಉತ್ತಮ ಆರಂಭ ತಂದುಕೊಟ್ಟಿದ್ದರು.
ಆದ್ರೆ ಮಿಡಲ್ ಓವರ್ ಗಳಲ್ಲಿ ಇನ್ನುಳಿದ ಬೌಲರ್ ಗಳು ವಿಕೆಟ್ ಗಳನ್ನು ಪಡೆಯಲಿಲ್ಲ.. ಸ್ಪಿನ್ನರ್ ಗಳು ಹೀನಾಯವಾಗಿ ವಿಫಲರಾದರು.
ಚಹಾಲ್, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಮಾತ್ರ ಪಡೆದರು. ಮಿಡಲ್ ಓವರ್ ಗಳಲ್ಲಿ ಬೌಲರ್ ಗಳು ವಿಕೆಟ್ ಪಡೆದರೆ ತಂಡದ ಗೆಲುವು ಸುಲಭವಾಗುತ್ತದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.








