ಸೆಪ್ಟೆಂಬರ್ 5 ಎಲ್ಲರ ಪಾಲಿನ ಮಹತ್ವದ ದಿನ. ಬದುಕು ರೂಪಿಸಿದ ಶಿಕ್ಷಕರಿಗೆ ಧನ್ಯವಾದ ಅರ್ಪಿಸುವ ದಿನವಿಂದು.
ಇಲ್ಲಿದೆ ಶಿಕ್ಷಕರ ದಿನಾಚರಣೆಯಂದು ಹಂಚಿಕೊಳ್ಳುವ ಶುಭಾಶಯದ ಸಂದೇಶಗಳು.✨♥️
`ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬುದು ಅದ್ಭುತ ಜೀವನ ಸಂದೇಶ.
ತಂದೆ, ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ.
ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆಗ ಬದುಕು ಇನ್ನೂ ಚೆಂದ.
`ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತೂ ನಮ್ಮಲ್ಲಿದೆ.
ಒಂದು ಅಕ್ಷರವನ್ನು ಕಲಿಸಿಕೊಟ್ಟವರೂ ಗುರುಗಳೇ ಎಂಬರ್ಥ ಇಲ್ಲಿನದ್ದು.
ಅಂದರೆ, ಬದುಕು ಎಂಬುದೇ ಕಲಿಕೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಕಲಿಯುವುದಕ್ಕೆ ಸಿಗುತ್ತದೆ.
ಹೀಗೆ ಒಳ್ಳೆಯ ವಿಚಾರಗಳನ್ನು ಕಲಿಯುತ್ತಾ ಮುನ್ನಡೆದಾಗ ಬದುಕು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಾ ಸಾಗುತ್ತದೆ.
ಪ್ರತಿಯೊಬ್ಬರ ಬಾಳಿನಲ್ಲೂ ಗುರುಗಳ ಪಾತ್ರ ಬಹಳ ಹಿರಿದು.ಕಾಲೇಜುಯಲ್ಲಿ ಶಿಕ್ಷಕ ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನ ಸುಂದರ ಬದುಕಿಗೆ ಬುನಾದಿ.
ಹೀಗಾಗಿ, ನಮ್ಮ ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಸದಾ ಋಣಿಯಾಗಿರುವುದು ಕೂಡಾ ನಮ್ಮ ಕರ್ತವ್ಯ. ಇಂತಹ ಗುರುಗಳಿಗೆ ಮೀಸಲಾದ ದಿನವೇ `ಶಿಕ್ಷಕರ ದಿನಾಚರಣೆ’.
ನಮ್ಮ ದೇಶದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರ್ಶ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ನಮ್ಮ ಪ್ರೀತಿಯ ಶಿಕ್ಷಕ, ಶಿಕ್ಷಕಿಯರಿಗೆ ಧನ್ಯವಾದ ತಿಳಿಸುವ, ಅವರ ಕೊಡುಗೆಯನ್ನು ಸ್ಮರಿಸುವ, ಅವರ ಪ್ರೀತಿಯನ್ನು ಗೌರವಿಸುವ ದಿನವೂ ಹೌದು.
ಇಂತಹ ಖುಷಿಯ ದಿನದಂದು ಹಂಚಿಕೊಳ್ಳುವ ಒಂದಷ್ಟು ಶುಭಾಶಯದ ಸಂದೇಶಗಳು ಇಲ್ಲಿವೆ.
* ಶಿಕ್ಷಕರೇ ಸ್ಫೂರ್ತಿ, ಶಿಕ್ಷಕರೇ ದಾರಿ. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತಂದಿರುವ ನನ್ನೆಲ್ಲಾ ಗುರುಗಳಿಗೆ ನನ್ನ ಹೃದಯಂತರಾಳದ ಧನ್ಯವಾದಗಳು. ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು
ಸ್ವಾತಿ ಎಲೆಮನಿ
ಬಿ,ಎ,ಅಂತಿಮ ವರ್ಷ
ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ
ಹಾಗೂ ಹೆಚ್,ಎಸ್,ಕೋತಂಬರಿ ವಿಜ್ಞಾನ ಸಂಸ್ಥೆ ವಿದ್ಯಾನಗರ ಹುಬ್ಬಳ್ಳಿ
ಹುಬ್ಬಳ್ಳಿ
#ಗುರುನಾಥ ನಗರ ಆದರ್ಶ ಕಾಲೋನಿ ಹುಬ್ಬಳ್ಳಿ