ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿ – ಭಾಗ ೩
ನಾನು ನನ್ನವಳ್ಳನ್ನ ಈ ಹಿಂದೆ ಹೇಳಿದಂತೆ ನನ್ನ ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿಯನ್ನು .
ಹೆಚ್ಚಾಗಿ ಕರೆಯುವುದು ಹೃದಯ ಅಂತಾ…
ನಾನು ನನ್ನ ಹೃದಯಾನಾ ಬಹಳ ದಿನಗಳ ನಂತರ ಕಣ್ಣು ಮಿಟುಕಿಸದೆ ನೋಡಿದ್ದು ಅಂದ್ರೆ ಅದು ನಮ್ಮ ಕಾಲೇಜ್ನ ಫೇರ್ವೆಲ್ ಡೇ ಅಂದು…
ಯಾಕೆ ಅಂತಿರಾ…! ಫೇರ ವೆಲ್ ಇದ್ದದೂ ಎಲ್ಲರಿಗೂ ಗೊತ್ತಿತ್ತು. ಕಾಮನ್ ಆಗಿ ಎಲ್ಲರೂ ಮಾತಾಡೋ ರೀತಿ ಅವಳು ನನ್ನ ಕೇಳಿದ್ಲು,
ಯಾವ ರೀತಿ ರೆಡಿಯಾಗಿ ಬರ್ತಿಯಾ ಅಂತಾ.
ಆಗ ಬಿಲ್ಡಪ್ ಗಾಗಿ ನಾನು ಛೇ ನಾನಾ….!
ನಾನ್ ಬರಲ್ಲಾ…ಎಂದು ಹೇಳಿ…ಅವಳ ಕರೆಗೆ ಓಗೊಟ್ಟು ಹೋದ ನನಗೆ ,ಅದ್ಬುತ ಕಾಯುತಿತ್ತು.
ಅಂದೂ ಅವಳೇನೂ ನನಗಿಂತ ಬೇಗಾ ಬಂದಿರಲಿಲ್ಲಾ…
ನಾನು ಬಂದು ಅರ್ಧ ಗಂಟೆ ಬಿಟ್ಟು ಬಂದ ಅವಳು…
ಕಂಗೋಳಿಸುವ ಸೀರೆಯುಟ್ಟು ಬಂದಿದ್ದಳು…
ಆದ್ರೆ ನನ್ನ ವಿಪರ್ಯಾಸ ಅಂದ್ರೆ…
ನನ್ನ ಕ್ರಶ್ ಪಕ್ಕದಲೇ ಅವಳನ್ನ ಕಂಡಾಗ…
“ಮಚ್ಚಾ ಲಡ್ಡು ಬಂದು ಬಾಯಿಗೆ ಬಿತ್ತಾ “
ಅನ್ನೋ ಮಾತು ಆಗ ನನ್ನ ಪಾಲಿಗೆ ನಿಜವಾಗಿ ಬಿಟ್ಟಿತು.
ನನ್ನ ಬಯಕೆಗೆ ಅಂದು, ಅವಳು ಕೊಂಚ ನಿರಾಸೆ ಉಂಟು ಮಾಡಿದ್ದರೂ ಅವಳ ಸನಿಹ…ಎಲ್ಲವನ್ನೂ ಮರೆಸಿ ಬಿಟ್ಟಿತು.
ಆ ದಿನ..ನನ್ನವಳು ನನ್ನ ಕೇಳಿದಳು..
“ನಿಜಾ ಹೇಳು ಚನ್ನಾಗಿ ಕಾಣಸ್ತಾ ಇದಿನಾ” ಅಂತಾ…ಎಲ್ಲಿತೋ ಏನೋ ಗೋತ್ತಿಲ್ಲಾ…
ಈ ಮಾತು ಅವಳಿಗೆ ಹೇಳಿ ಬಿಟ್ಟೆ
“ಈಡಿ ಆಡಿಟೋರಿಯಂ ಅಲ್ಲೆ ಎಲ್ಲರಿಗಿಂತ ಸಖ್ಖತ್ತಾಗಿ ಕಾಣಸ್ತಾ ಇದಿಯಾ”
ಅಂತಾ ಸತ್ಯ ತಿಳಿದ ನಮ್ಮ ಹುಡಗುಗಿ…ಕಿವಿಮೇಲೆ ಹೂ ಇಡಬೇಡ ನಿಜ ಹೇಳು ಅಂದಾಗ ಅಂದು ಮಾತು ಮರೆತು ನಿಂತು ಬಿಟ್ಟಿದೆ..
ಆದರೆ ಅವಳಿಗೆನೂ ಗೊತ್ತು….?
ಅವಳ ಅಂದ ಕಂಡು ಮೂಕವಿಸ್ಮಿತನಾದ ನನಗೆ ಅವಳ ಮುಂದೆ ಮಾತು ಹೊರಡುತ್ತಿರಲಿಲ್ಲ ಅಂತಾ, ಮಾತನಾಡಲು ನಾಲಿಗೆ ಸಹಕರಿಸುತ್ತಿರಲಿಲ್ಲಾ ಅಂತಾ…
ಅಂದು ಹೇಳದೆ ಕೇಳದೆ ಮನಸ್ಸಲ್ಲಿ ಬಂದು ಕುಳಿತು ಬಾಗಿಲಿಗೂ ಹಾಕಿ ಮನದಲ್ಲಿ ಕುಳಿತು ಕೊಂಡವಳು, ಆ ಬಾಗಿಲಿನ ಬೀಗ ಸುರಕ್ಷಿತವಾಗಿಡಬೇಕು ಎಂದು ಮರೆತು ಹೋಗಿ ಇಂದು…ನನ್ನ ಮನದರಸಿ ಖಾಯಂ ಆಗಿ ಉಳಿದು ಬಿಟ್ಟಿದ್ದಾಳೆ.
ಎಲ್ಲ ಹುಡುಗರ ವೀಕ್ ನೆಸ್ ಅಂದ್ರೆ ಅವರವರ ಹುಡುಗಿಯರು.
ಕಾರಣ… ಪ್ರಪಂಚದಲ್ಲಿ ಏನೇ ಆದರೂ ಎದುರಿಸುವ ಧೈರ್ಯ ಇರುವ ನಾವು..
ನಮ್ಮ ಹೃದಯ ನಮ್ಮ ಮುಂದೆ ಬಂದಾಗ ನಾವು ಕಂಪ್ಲೀಟ್ ಮ್ಯೂಟ್ ಆಗೋದಂತು ಪಕ್ಕಾ…
ಹಾಗೆ ನಾನು ಆ ದಿನ ಅವಳ ಹಿಂದೆ ಹಿಂದೆ ಸುತ್ತೋದು , ಅವಳನ್ನ ಕಣ್ತುಂಬಿಕೊಳ್ಳೊದು ಬಿಟ್ರೆ ಬೇರೆ ಕೆಲಸ ನೆನಪಿಗೆ ಬಾರದಾಗಿತ್ತು…
ನಾನು ಎಂದೂ ಮರೆಯದ ದಿನ ಅದು.. ನಾನು ಮೊದಲೇ ಹೇಳಿದ ಹಾಗೆ ನನ್ನವಳಿಗೆ ನಾನು ಹೇಳಿದ್ದೆ ಗೊಂಬೆಯಂತೆ ಸೀರೆಗೆ ನೇರಿಗೆ ಹಾಕಿ ಸಿಂಗಾರವಾಗು ಎಂದು..
ಆದ್ರೆ ಸಿಂಪಲ್ ಆಗಿ ಬಂದ ನನ್ನವಳು…ಲಕ್ಷಣವಾಗಿ ಮುಡಿದ ಮಲ್ಲಿಗೆ…ಅವಳ ಬಳೆ.. ಆ ಕಣ್ಣನೋಟ..
ಇಡೀ ಆಡಿಟೋರಿಯಂ ಅನ್ನೆ ನಡುಗಿಸುವ ಅವಳ ಘರ್ಜನೆ…..
ಎಲ್ಲರನ್ನೂ ಒಟ್ಟು ಹಾಕಲು ಅವಳು ಪಡುತ್ತಿದ್ದ ಶ್ರಮ. ಎಲ್ಲವೂ ನನ್ನ ಕಣ್ಣು ಕಟ್ಟಿದಂತಿದೆ.
ಎಲ್ಲದಕ್ಕೂ ಮಿಗಿಲಾಗಿ.
ಅವತ್ತು ದಿನದ ಕೊನೆಯಲ್ಲಿ ,
ಇಬ್ಬರೂ ಒಟ್ಟಿಗೆ ತೆಗೆಸಿಕೊಂಡ ಫೋಟೋ ಶೂಟ್ ಮದುವೇ ಜೊಡಿಯನ್ನೂ ಮೀರಿಸುವ ಸರಿಸಾಟಿ ಇಲ್ಲದ ನಮ್ಮ ಜೊಡಿ. ಒಂದು ಸಾಮಾನ್ಯ ಅದ್ಬುತವಾಗಿತ್ತು.
Ranjeeta.m.y








