ಪ್ರಪೋಸ್ ಮಾಡಿದಾಗ ಕೊಟ್ಟ ಕಾರಣದ ನೆನಪು..!!!
ನಮ್ ಟೈಮ್ ನಲ್ಲಿ ಹೈಸ್ಕೂರ್ ಮುಗಿದು ಕಾಲೇಜಿನ ಮೆಟ್ಟಿಲೇರುತ್ತೀದೀವಿ ಅಂತ ಖುಷಿಗೆ ಒಂದ್ ರೀತಿ ನಾವೆಲ್ಲಾ ಆಕಾಶದಲ್ಲಿ ಹಾರಾಡ್ತಿದ್ವಿ.. ನಮ್ಮ ಬ್ಯಾಚ್,, ಆಗಿನ ನನ್ನ ಜನರೇಷನ್ ಅವೆರೆಲ್ಲರೂ ಸಹ..
ಕಾಲೇಜ್ ಅಂದ್ರೆ ಹಾಗೆ ಹೀಗೆ.. ಫ್ರೀಡಂ, ಎಂಜಾಯ್ ಮೆಂಟ್ , ಬಂಕ್ , ಫ್ರೆಂಡ್ಸ್ ಜೊತೆ ಸುತ್ತಾಟ ಅಂತೆಲ್ಲಾ ಅಂದುಕೊಂಡಿದ್ವಿ.. ಕೆಲವರಿಗೆ ಹಾಗೆ ಇತ್ತೇನೋ..
ನನಗೆ ಸ್ಕೂಲ್ ತರಹವೇ ಅನ್ಸಿತ್ತು.. ಯೂನಿಫಾರ್ಮ್ ಒಂದಿರಲಿಲ್ಲ ಅಷ್ಟೇ..
ಯಾವಾಗಲೂ ಫ್ಯಾಷನ್ ಬಗ್ಗೆ ಹೆಚ್ಚು ಗಮನ ಕೊಡ್ತಿದ್ದವಳು ನಾನು.. ಒಂದಿನ ಹೋಗೋ ತರ ಇನ್ನೊಂದಿನ ಹೋಗಬಾರದು ಅನ್ನೋ ಆಲೋಚನೆ ..
ಯಾವಾಗಲೂ ವಿಭಿನ್ನವಾಗಿಯೇ ರೆಡಿಯಾಗ್ತಿದ್ದೆ.. ಡ್ತೆಸ್ಸಿಂಗ್ ಇರಬಹುದು ,, ಹೇರ್ ಸ್ಟೈಲ್ ಇರಬಹುದು..
ಡಿಗ್ರಿ ಬರುವ ವರೆಗೂ ತುಂಬಾ ಇನೋಸೆಂಟ್ ಆಗಿರುತ್ತೀವಿ ಎಲ್ರುನೂ ನಾನುನೂ…
ಆಗ ಹೊಸ ಹೊಸ ಆಸೆ ಕನಸುಗಳು ಚಿಗುರೋ ಸಮಯ ,, ಕ್ರಷ್ , ಆಕರ್ಷಣೆ / ಅಟ್ರಾಕ್ಷನ್ ,, ಯಾವುದು ಹೊಸದು ಅನ್ಸುತ್ತೋ ಅದರ ಮೇಲೆ ಆ ವಯಸ್ಸಿನಲ್ಲಿ ನಾವು ಅಟ್ರ್ಯಾಕ್ಟ್ ಆಗುವುದು ಸಹಜ..
ಆದ್ರೆ ಆಗಲೂ ನಾನು ಈ ಸತ್ಯವನ್ನ ಅರಿತಿದ್ದೆ.. ಪಿಯು ಲೆವೆಲ್ ನಲ್ಲಿ ಎಲ್ಲವೂ ಕಲರ್ ಫುಲ್ ಅನ್ಸಿದ್ರೂ ಹೆಚ್ಚು ಆ ಬಗ್ಗೆ ಡೀಪ್ ಆಗಿ ಹೋಗ್ತಿರಲಿಲ್ಲ..
ಆಗ ಇನೋಸೆಂಟ್ ಆದ್ರೂ ಈ ಏಜ್ ,, ಈ ವಯಸಲ್ಲಿ ಏನನ್ಸಿದ್ರೂ ಅದು ಕಾಮನ್.. ಅದು ಎಲ್ಲರಿಗೂ ಆಗೋದೆ.. ಆದ್ರೆ ಒಂದ್ ತಪ್ಪು ಹೆಜ್ಜೆ ಭವಿಷ್ಯ ಹಾಳು ಮಾಡುತ್ತೆ ಅಂತ ನಮ್ಮ ಮನೆ ಪಕ್ಕದ ಆಂಟಿ ( ಟೀಚರ್ ) ಯಾವಾಗಲೂ ನಮಗೆ ಹೇಳುತ್ತಾ ಒಂದ್ ರೀತಿ ನಮ್ಮನ್ನೆಲ್ಲಾ ಬದಲಾಯಿಸಿದ್ರು..
ನಾನು ಅವರ ಪ್ರಭಾವಕ್ಕೆ ಒಳಗಾಗಿದ್ದೆ…
ಆದ್ರೆ ಈಗ ಹೇಳೋಕೆ ಹೊರಟಿರೋದು ಏನ್ ಅಂದ್ರೆ..
ನನ್ನ ಪ್ರಪೋಸ್ ಕಥೆ..
ಸೆಕೆಂಡ್ ಪಿಯುನಲ್ಲಿ 17 ವರ್ಷ .. ಬಾಯಿಬಡಿಕಿ … ನನ್ನ ತಂಟೆಗೆ ಬಂದರೆ ಯಾರನ್ನೂ ಬಿಡದ ಗುಣ ನಂದು.. ತಪ್ಪಿದ್ರೆ ಒಪ್ಪಿ ಸೈಲೆಂಟ್ ಇರುತ್ತಿದ್ದೆ… ಇಲ್ಲ ಅಲ್ಲೇ ಡ್ರಾ ಅಲ್ಲೇ ಬಹುಮಾನ.. ನೇರ ದಿಟ್ಟ ನಿರಂತರ ನನ್ನ ಗುಣ ಮೊದಲಿನಿಂದಲೂ..
ನಮ್ಮದು ಗರ್ಲ್ಸ್ ಕಾಲೇಜು… ಎಲ್ಲ ಹುಡುಗೀರು ಬೋಲ್ಡ್ ಆಗಿಯೇ ಇದ್ರು.. ಹುಡುಗೀರೇ ಸಾಕು ಹುಡುಗೀರನ್ನ ಗೋಳಾಡಿಸೋಕೆ ಅನ್ನೋ ಅಂಥವರೇ ಇದ್ದಿದ್ದು.. ಅಲ್ಲೇ ಪಕ್ಕದ ಕಾಲೇಜು ಕಂಬೈನ್ … ಹುಡುಗರು ಹುಡುಗಿಯರು ಇಬ್ಬರೂ ಓದುತ್ತಿದ್ರು..
ಅಲ್ಲೇ ಪಕ್ಕದ ಕಾಲೇಜಿನ ಹುಡುಗರು ನಮ್ಮ ಕಾಲೇಜು ಹುಡುಗೀರನ್ನ ನೋಡೋಕೆ ಬರುತ್ತಿದ್ರು.. ಏನಂದ್ರೆ ಅವರು ಡಿಗ್ರಿ ನಾವು ಪಿಯುಸಿ ಅಷ್ಟೇ ವ್ಯತ್ಯಾಸ..
ಅದೇ ಕಾಲೇಜಿನ ಗುಂಪಿನವರಲ್ಲಿ ಒಬ್ಬ ನನ್ನ ಫ್ರೆಂಡ್ ನ ಗುರಾಯಿಸುತ್ತಿದ್ದ.. ಅವಳೇನ್ ಕಮ್ಮಿ ಅಲ್ಲ ಅವಳು ಕಣ್ಣಲ್ಲೇ ಅವನೆಡೆಗೆ ಒಂದು ಲುಕ್ ಕೊಡ್ತಿದ್ದಳು.. ಅವಳಿಗೂ ಅವನ ಮೇಲೆ ಕ್ರಶ್ ಇತ್ತು..
ಇಬ್ಬರೂ ಹೇಳಿಕೊಳ್ಳೋಕೆ ಸಾಯ್ತಿದ್ರು.. ಅವನು ಬರಲಿ ಅಂತ ಇವಳು ಚಾಟ್ ಸೆಂಟರ್ ಗೆ ನನ್ನ ಬಲವಂತವಾಗಿ ಕರೆದುಕೊಂಡು ಹೋಗೋದು.. ಅವನು ಅಲ್ಲಿಗೇ ಅವನ ಫ್ರೆಂಡ್ಸ್ ಜೊತೆಗೆ ಬರೋದು..
ಅಲ್ಲಿ ಇಂಡೈರೆಕ್ಟ್ ಮಾತುಗಳು ಬೇರೆ..
ಅಬ್ಬ ನನಗೆ ತಲೆ ಕೆಟ್ಟು ಹೋಗ್ತಿತ್ತು.. ಹೇಯ್ ಹೋಗಂತ ಸುಮ್ನೆ ಆಗಿಬಿಡ್ತಿದ್ದೆ.. ನನ್ನ ಜೊತೆಗೆ ನನ್ನ ಮತ್ತೊಬ್ಬಳು ಫ್ರೆಂಡ್ ಬರುತ್ತಿದ್ದಳು..
ಅವಳು ಈ ನಮ್ಮ ಈ ಜೋಡಿಗೆ ಮೀಡಿಯೇಟರ್ ಆಗಿಬಿಟ್ಟಿದ್ದಳು ಅತ್ತ.. ಅವರಿಬ್ಬರ ನಂಬರ್ ಎಕ್ಸ್ ಚೇಂಜ್ ಮಾಡಿಸಿದ್ದಳು..
ಆಮೇಲಿಂದ ಈ ಜೋಡಿ ನಮ್ಮನ್ನೇ ಮರೆತುಬಿಡೋದಾ…
ಕ್ಲಾಸ್ ಮುಗಿಯೋವರೆಗಷ್ಟೇ ಅವಳು ನಮ್ ಜೊತೆ ಇರುತ್ತಿದ್ದದ್ದು… ಗೇಟ್ ನಿಂದ ಹೊರ ಬರುತ್ತಿದ್ದ ಹಾಗೆ ಅವನ ಬೈಕ್ ಹತ್ತಿ ಹೋಗಿಬಿಡ್ತಿದ್ದಳು..
ನಮ್ಮನ್ನ ಕಡೆಗಣಿಸುತ್ತಿದ್ದಳು.. ನಾವು ಅವಳ ಜೊತೆಗೆ ಅಷ್ಟಕ್ಕಷ್ಟೇ ಆಮೇಲೆ..
ಹೀಗೆ ತಿಂಗಳು ಉರುಳಿತು.. ಅವತ್ತು ಬಂದಳು ಅಕ್ಕ … ಲೇ ನಮ್ಮು , ಪೂಜಾ, ಪೂಜಾ ಇವತ್ತು ನಮ್ ಹುಡುಗನ ಬರ್ತ್ ಡೇ ಕಣೆ ಪ್ಲೀಸ್ ಬಾ ಎಂದವಳಿಗೆ ನೇರವಾಗಿ ಮುಖಕ್ಕೆ ಹೊಡೆದಾಗೆ ಬೈದು ಹೇಳಿದ್ರೂ ಬಿಡದೇ ರಿಕ್ವೆಸ್ಟ್ ಮಾಡಿ ನಮ್ಮನ್ನ ಕರೆದುಕೊಂಡು ಹೋದವಳು ಸೀದಾ ಮೆಕ್ಡಿಗೆ..
ಅಲ್ಲಿ ಒಂದ್ ರೀತಿ ಅನ್ ಕಮ್ಫರ್ಟಬಲ್ ನನಗೆ ನನ್ನ ಫ್ರೆಂಡ್ ಗೆ… ಆ ಹುಡುಗ ಅವನ ಒಂದ್ ನಾಲ್ಕು ಜನ ಫ್ರೆಂಡ್ಸ್ ಇದ್ರು ಹುಡುಗರು , ಹುಡುಗೀರು.. ಎಲ್ಲರೂ ಗಿಫ್ಟ್ ಕೊಟ್ಟು ,,, ಟೇಬಲ್ ಸುತ್ತ ಕುಳಿತಿದ್ದರು.. ನಾನು ನನ್ನ ಫ್ರೆಂಡ್ ಹೋದ್ವಿ.. ನನ್ನ ನೋಡಿ ಸುತ್ತಲೂ ಆ ಬರ್ತ್ ಡೇ ಬಾಯ್ ಗೆ ಕಿವಿಯಲ್ಲಿ ಅವನ ಫ್ರೆಂಡ್ಸ್ ಏನೋ ಹೇಳ್ತಿದ್ದರು..
ನಾನು ಇಗ್ನೀರ್ ಮಾಡಿದೆ.
ಸೀದಾ ನನ್ನ ಫ್ರೆಂಡ್ ಇದ್ದವಳು ನಮ್ಮು ಇಲ್ಲಿ ಕೂರು ಅಂತ ಅವನ ಪಕ್ಕ ಒಂದು ಕಾಲಿ ಬಿಟ್ಟಿದ್ದ ಸೀಟ್ ನಲ್ಲಿ ಕೂರೆಂದಾಗ ಶಾಕ್ ನಲ್ಲಿ ಇಲ್ಲ ನಾನು ಬೇರೆ ಕಡೆ ಕೂರುವೆ ಎಂದ್ರೂ ಬಿಡದೇ ಬಲವಂತವಾಗಿ ಕೂರಿಸಿದ್ರು..
ಶಾಕ್ ಅಲ್ಲಿ ನಾನು ನನ್ನ ಫ್ರೆಂಡ್ ನ ಗುರಾಯಿಸುತ್ತಿದ್ದೆ. ಪೂಜಾ ಮತ್ತೊಂದ್ ಕಡೆ ಅವಳ ಪಕ್ಕ ಕೂತಳು..
ನನಗೆ ಇನ್ನಷ್ಟು ಅನ್ ಕಮ್ ಫರ್ಟ್..
ಆ ಬರ್ತ್ ಡೇ ಬಾಯ್ ನನ್ನೇ ವಿಚಿತ್ರವಾಗಿ ನೋಡ್ತಿದ್ದಾನೆ.. ನಾನು ತಲೆ ಕೆಟ್ಟಿದ್ಯಾ ಇವನಿಗೆ ಅಂದಯಕೊಂಡು ಕುಳಿತಿದ್ದೆ.. ಸುಮ್ನೆ.. ಆಗ ಎಕ್ಸಾಕ್ಟ್ ಆಗಿ ಹೇಗೆ ಫೀಲ್ ಮಾಡುತ್ತಿದ್ನೋ ಮರೆತು ಹೋಗಿದೆ ನನಗೆ..
ಬಹುಶಃ ನರ್ವಸ್ ಆಗಿದ್ನಾ ಗೊತ್ತಿಲ್ಲ..
ಇದ್ದಕ್ಕಿದ್ದಂತೆ ಅದೇನಾಯ್ತೋ ಗೊತ್ತಿಲ್ಲ ಎಲ್ಲರೂ ಅವನನ್ನ ವಿಚಿತ್ರವಾಗಿ ನೋಡ್ತಾ ಅವನನ್ನ ಹುರಿದುಂಬಿಸೋದಕ್ಕೆ ಶುರು ಮಾಡುದ್ರು..
ನಾನು ಏನೋನಡೀತಿದೆ ಏನಂತ ಅರ್ಥವಾಗದೇ ಸುಮ್ನಾದೆ….
– ನಿಹಾರಿಕಾ ರಾವ್ –
( in prathilipi – Author Niharika Rao )