ಸಕ್ಕರೆ ತರಲು ಹೋದ ನಾನು ಸಕ್ಕರೆ ಗಿಂತಾ ಸಿಹಿಯಾದ ಹೆಣ್ಣನ್ನು ಕಂಡೆ
ಹೌದೂ…ಹಾಗೆ ನಾನು ನನ್ನ ನಿರ್ಧಾರದ ಬಗ್ಗೆ ಹೇಳೊ ಮೊದಲು, ನಾನು ನಮ್ಮ ಜರ್ನಿ..ಸ್ಟಾರ್ಟ ಆಗಿದ್ದನ್ನ ನೆನಪ ಮಾಡ್ಕೊ ಬೇಕಾಗತ್ತೇ….
ಯಾಕಂದ್ರ ನಮ್ಮ ಆರಂಭ…..ಇದೆಯಲ್ಲಾ…ಅಲ್ಲಿಂದ ಹೊಸ ,ಪುಳಕ…ರೊಮಾಂಚನ ಆರಂಭವಾಗೋದು…..
ಏನ ಗುರು…..!
ರೋಮಾಂಚನ …!
ಪುಳಕ…! ಅಂಥಾ…ಮತ್ತೆ….?
ರಾಗಾನಾ…………
ಅಂತಾ ಯೋಚನೆ ಮಾಡೋರಿಗೆ … ಪಿಚ್ಚರ್ ಇನ್ನೂ ಆರಂಭಾನೆ ಆಗಿಲ್ಲಾ ಇದು ಬರಿಟ್ರೈಲರ್ …ಅನ್ನೋದನ್ನ ನಾನು ನೆನಪಿಸೋಕೆ ಇಷ್ಟಾ ಪಡ್ತಿನಿ….
ಅದೂ ಏನ ಗೋತ್ತಾ ಈ ಲವ್ವ ಸ್ಟೋರಿ ಇದೆ ಅಲ್ವಾ….ಎಲ್ಲಿಂದ ಆರಂಭ ಮಾಡಿದ್ರೂ ಅದು ಅದ್ಭುತಾನೆ…ಯಾಕೆ ಗೋತ್ತಾ….ಅಲ್ಲಿ ಇರೋದು….ಪ್ರೀತಿ….
ಪ್ರೀತಿ ಹುಟ್ಟಿದ್ದೂ ಹೇಳದೇ ಕೇಳದೇ ಆದ್ರೂ…ನಾನು ನನ್ನ ಪ್ರೀತಿನ…ಮೋಟ್ಟ ಮೋದಲ ಭಾರಿಗೆ ಕಂಡಿದ್ದು.
ಆ ನಮ್ಮ ಸಿಟಿಯ್ ಫೇಮಸ್ ಮಾರ್ಕೆಟ್ ನಲ್ಲಿ…
ಏನೂ ಮಾರ್ಕೆಟ ನಲ್ಲಾ….!!!!
ಅನ್ನೋರಿಗೆ…
ಹೌದು ಮಾರ್ಕೇಟ್ ನಲ್ಲೆ….
ಹೇಗೆ ಗೋತ್ತಾ….!?.
ಅದು ಅಚಾನಕ್ ಅಗಿ ಆವತ್ತು…….. ನನ್ನ ಅಮ್ಮಾ ….ನನಗೆ ಸಕ್ಕರೆ ತರೊಕೆ ಹೇಳಿದ್ರು.. ಅಮ್ಮಾ ಸಕ್ಕರೆ ತರೊಕೆ ಯಾವ ಶುಭಗಳಿಗೆಲಿ ಹೇಳಿದ್ರೊ ….. ಅಂದು ಸಕ್ಕರೆ ತರಲು ಹೋದ ನಾನು ಸಕ್ಕರೆ ಗಿಂತಾ ಸಿಹಿಯಾದ ಹೆಣ್ಣನ್ನು ಕಂಡೆ
ಆಗ ಹಾಗೆ ಸುಮ್ಮನೆ….ನೋಡ್ತಾ ನೋಡ್ತಾ …ಈ ಕಾರ್ನರ ನಿಂದ ಮಾರ್ಕೆಟ್ ನ ಆ ಕಾರ್ನರ್ ವರೆಗೂ ಸುಮ್ಮನೆ ಒಂದ ಕಣ್ಣ ನೋಟ ಬೀರಿದಾಗ…ಈ ಕಣ್ಣು…ಕದ್ದು ನೋಡುವಂತೆ…. ಆವತ್ತು….!
ನೋಡಲು ಸುಂದರವಾಗಿದ್ದಳು
ಅವಳ ಕಣ್ಣು ……
ಅವಳ ನಡಿಗೆ…
ಅವಳ ರೂಪ…
ಕಣ ಕಟ್ಟೋ ಹಾಗಿದ್ರು
ಏನೋ ……?
ಅವಳು ಬಂದ ಸ್ಥಿತಿ…!?
ಎರಡೂ ಕೈಯಲ್ಲಿ…ಸಾಮಗ್ರಿಗಳನ್ನ ಹಿಡಿದೂ ಬರೋದನ್ನ ಕಂಡ….ನಾನು..?
ಒಂದೇ ನೋಟ ನೋಡಿ… “ಅಯ್ಯೋ ಅಂಟಿ…ಥರಾ ಬರ್ತಾ ಇದ್ದಾಳಲ್ಲಾ ಅಂಥಾ ನೋಡಿ”…
…. ಅಂದು ನಾಚಿಕೆ, ಭಯದಿಂದ…ಕಣ್ಣು ನೆಲ ನೋಡಿತ್ತು….
ಆದ್ರೆ ನನ್ನ ಹುಚ್ಚು ಬುದ್ದಿಗೆ ತಿಳಿದಿರಲಿಲ್ಲ “ಆ….ಅಂಟಿಯ ಪರ್ಮನೆಂಟ್ ಅಂಕಲ್ ನಾನೆ” ಅಂತಾ…..
ನೋಡಲು ಸುಂದ್ರವಾಗೆ ಏನೋ ಇದ್ಲು ಆದ್ರೂ…ಅವಳ ಕೈಯಲ್ಲಿ ಇದ್ದ ಆ ಸಾಮಗ್ರಿಗಳು ಅವಳ್ಳನ ಅಂಟಿ ತರ ಅನ್ನೋಹಾಗೆ ಮಾಡಿತ್ತು….
ಆ ದೃಶ್ಯ ಇನ್ನೂ ಕಣ್ಣಮುಂದೆ ಇನ್ನೂ ಇದೆ…
ಆದ್ರೆ ಆಆಆ ನೋಟ .
ನನ್ನ ಕಣ್ಣು ಅವಳು ಮಾರುಕಟ್ಟೆಯಿಂದ ಹೊರ ಹೋಗೊವರೆಗೂ ನೋಡಿತ್ತು….
ಆದಿನ ಇನ್ನೂ ಮರೆತಿಲ್ಲ….ಅವಳ ಆಕಾಶ್ ನೀಲಿ ಬಣ್ಣದ ಬಟ್ಟೆ….ಅವಳು..ಕಂಡ ರೀತಿ…..🙈 ಎಲ್ಲವೂ…..ಈ ನನ್ನ ಕಣ್ಣುಗಳು ಬಲ್ಲವೂ…
ಅವುಗಳಿಗೆ ತಿಳಿದಿರಲಿಲ್ಲ ಅವಳನ್ನ ಇಷ್ಟು ಹೊತ್ತು, ಮೆರೆಯುವವು ಎಂದು….








