ಆದ್ರೆ ಆವಳನ್ನ ಸೀರೆಯಲ್ಲಿ ನೋಡೊ ಮದ್ಲು ಅಂದು ಕೊಂಡಿದ್ದೆ. ಅವಳು ಗೊಂಬೆಯಂತೆ ಕಾಣುತ್ತಾಳೆಂದು ಗೊತ್ತಿತ್ತು. ಆದ್ರೆ ಅಪ್ಸರೆಯಂತೆ ಕಾಣುತ್ತಾಳೆಂದು ತಿಳಿದಿರಲಿಲ್ಲ.
ಆವತ್ತು ನನ್ನ ಕ್ರಶ್ ಕೂಡ ಅವಳ ಮುಂದೆ ಡಲ್ ಆಗಿ ಕಾಣುತಿದ್ದಳು..ನಾನು ಕಾಲೇಜ್ ಗೆ ಬರೋ ಮೊದಲು ಅಂದು ಕೊಂಡಿದ್ದೆ. ಇವತ್ತು ಎಲ್ಲರಿಗಿಂತ ಹೆಚ್ಚಾಗಿ ನನ್ನ ಕ್ರಶ್ ನೇ ನೋಡಬೇಕು ಅಂತಾ..
ಆದ್ರೆ ನನ್ನ ಕ್ರಶ್ ನೋಡಬೇಕೆಂಬ ಆಸೆಯನ್ನ ನನ್ನ ಪ್ರೇಯಸಿ ಹೇಳದೆ ಕೇಳದೆ ಕ್ರಷ್ ಮಾಡಿ ಬಿಟ್ಟಿದ್ದಳು.
ಅಂದು ನನ್ನನ್ನು ಬಿಟ್ಟು ಬೇರೆ ಯಾರೇ ಅವಳನ್ನ ನೋಡಿದರು…ನನಗೆ ತಿಳಿಯದೆ ನನಗೆ ಅವರ ಮೇಲೇ ಬೆಟ್ಟದಷ್ಟು ಕೋಪ ಉಕ್ಕಿ ಹರಿದಿದ್ದಂತು ನಿಜ.
ಆದ್ರೆ… ನಾನು ನನ್ನ ಮನಸ್ಸಿಗೆ ಒಂದು ಮಾತು ಹೇಳಿದ್ದೆ. ಅಷ್ಟು ಜನರ ನಡುವೆ ನನ್ನವಳು ಚಂದ ಕಂಡರು ಅಷ್ಟೇನೂ ವಿಶೇಷ ಇರೋದಿಲ್ಲಾ ಎಂದು. ಆದರೆ ಈ ಮಾತನ್ನು…ಕ್ಷಣದಲ್ಲಿ ಸುಳ್ಳು ಮಾಡಿದ ಅವಳನ್ನ ಕಾಣಲು ನನ್ನ ಕಣ್ಣುಗಳು ಬೇಡಾ ಬೇಡಾ ಅಂದ್ರೂ ಅವಳ್ಳನ್ನೆ ಹುಡುಕುತ್ತಿದ್ದ ಕಣ್ಣುಗಳು ..ಅವಳನ್ನು ಅಷ್ಟಜನರ ಮಧ್ಯೆಯೂ ಕದ್ದು ನೋಡುತ್ತಿತ್ತು.
ಆದ್ರೆ ಆವತ್ತು ನನ್ನ ಒಡತಿಯನ್ನ ಈ ನನ್ನ ಪುಟ್ಟ ಹೃದಯ ಕದ್ದು ಕದ್ದು ನೋಡಿದಷ್ಟು…ಮತ್ತೆ ಬೇರೆ ಯಾರನ್ನು ನೋಡಿರಲಿಲ್ಲಾ.ನನ್ನ ಪ್ರೀತಿಯನ್ನು ಸೀರೆಯಲ್ಲಿ ಕಂಡ ಈ ಕಳ್ಳ ಹೃದಯ… ಹೃದಯದ ಯಾವುದೋ ಒಂದು ಮೂಲೆಯಲ್ಲಿ..ಸಣ್ಣಗೆ.. ಹಾಡನ್ನ ಗುನುಗಿದ್ದು ಇನ್ನು ನೆನಪಿದೆ.
ಸುಂದರಿಯ ಕಂಡು ಪ್ರೇಮ ಪ್ರಪಾತಕ್ಕೆ ಜಾರಿ ಈ ಹೃದಯ ಅವಳನ್ನ ಕಂಡು…” ಸೀರೆಲಿ ಹುಡಗಿರ ನೋಡಲೇ ಬಾರದು ನಿಲ್ಲಲ್ಲಾ ಟೆಂಪ್ರೇಚರು…ಅನ್ನೋ ಹಾಗೆ….ನನ್ನ ಮನಸ್ಸು ಸಣ್ಣಗೆ ಅವಳತ್ತ ಜಾರಿದ್ದಂತು ನಿಜ… ಆದ್ರೆ ಅಂದು ಅವಳ ಮಿಂಚಿನ ನೋಟ ಹೊಂದಿದ ಕಣ್ಣು.ನೆಟ್ಟನೆಯ ಮೂಗು,ಬಾಣದಂತಹ ಹುಬ್ಬು..ಬೆಣ್ಣೆಯಂತಹ ಕೆನ್ನೆ, ನನ್ನ ಕಣ್ಣುಗಳನ್ನು ಬೇರೆ ಏನೂ ನೋಡದಂತೆ ಕಟ್ಟಿಹಾಕಿದ್ದವು.
ಅವಳ ಕತ್ತಲ್ಲಿದ್ದ ಕೊರಳ ಹಾರ..ನನ್ನ ಮನಸ್ಸನು ಕದ್ದಿದ್ದರೆ. ಅವಳ ಕಾಡಿಗೆ ಹಚ್ಚಿದ್ದ ಕಣ್ಣು ನನ್ನ ಮನಸ್ಸು ಕೆಡಿಸಿ ಬಿಟ್ಟಿತ್ತು.ಇನ್ನೇನೂ ಹಳಿತಪ್ಪಿದ ರೈಲಿನಂತಾದ ಈ ಹೃದಯ ಆವತ್ತ ಹೃದಯ ಅಂದುಕೊಂಡು ಬಿಟ್ಟಿತು. ಹೋಗು ಇನ್ನು ಕಾಯ ಬೇಡ ಹೋಗಿ ಇನ್ನೆನೂ ಪ್ರೇಮ ನೀವೆದನೆ ಮಾಡಿಬೀಡಲೇನೋ ಎಂದು…ಆದ್ರೆ ಆವತ್ತು ತಿಳಿಯದೆ ನನ್ನ ಮನಸ್ಸು ಕೊಂಚ ಕೋಪಿತವಾಗಿದ್ದು.
ಅಂದು ಅವಳ ಮುಂದೆ ಪ್ರೇಮ ನಿವೇದನೆ ಮಾಡುವುದನ್ನು ತಡೆದಿತ್ತು. ಆಗಾಗ ಶಿವಪೂಜೆಯಲ್ಲಿ ಕರಡಿಯಂತೆ ಬರುತ್ತಿದ್ದ ನನ್ನ ಸ್ನೇಹಿತರು ಅವಳ ಜೊತೆ ಫೋಟೋ ತಗೆಸಿಕೊಳ್ಳುತ್ತಿದ್ದದ್ದನ್ನು ಕಂಡು ನನ್ನ ಎಲ್ಲ ಪ್ರೆಂಡ್ಸ್ ಗಳನ್ನ ಹೊಡೆದು ಹಾಕ್ಲೇನೋ ಎಂದು ಅನ್ನಿಸಿತ್ತು.
ಆದ್ರೆ…ಏನ್ ಮಾಡ್ಲಿ ಅವಳು ಕಾಲೇಜ್ ನಲ್ಲಿ ಫೇಮಸ್… ಹೀಗಾಗಿ ಅವಳ ಬಳಿ ಎಲ್ಲರೂ ಫೋಟೋ ತಗೆಸಿಕೊಳ್ಳಲು ಬರುತ್ತಿದ್ದರು.
ಇದೇ ರೀತಿ ಆ ಕ್ಷಣದಲ್ಲಿ ನನ್ನ ನೆನಪಿನ ಬುತ್ತಿಯಲ್ಲಿನ ಒಂದು ತುತ್ತು ಕಸಿಯಲು ಬಂದವಳು…ನನ್ನವಳ..ಸ್ನೇಹಿತೆ. ವಿಲನ್ ಅಂತೆ ಕಂಡಿದ್ದಳು.ಆದ್ರೆ ಆಸೆ ಪಟ್ಟು ನನ್ನವಳೊಂದಿಗೆ ಮಾಡಬೇಕೆಂದ ramp walk ಗೆ ಅವಳ ಸ್ನೇಹಿತೆ ಬಂದು ಕಲ್ಲು ಹಾಕಿದ್ದು.. ಹೃದಯಕ್ಕೆ ಬೇಸರ ಉಂಟು ಮಾಡಿತ್ತು.
ಮುಂದುವರೆಯುವುದು…….
Ranjeeta.m.y








