ಇತರರಿಗೆ ಗೌರವ ಕೊಡಲೇಬೇಕು ನಿಜ.. ಹಿರಿಯರೇ ಇರಲಿ, ಕಿರಿಯರೇ, ಮತ್ತಿನ್ಯಾರೇ ಇರಲಿ,, ಗೌರವ ಅವರಿಗೆ ಕೊಡುವುದು ನಮ್ಮ ಕರ್ಮವೂ ಹೌದು , ಧರ್ಮವೂ ಹೌದು..
ಆದ್ರೆ ಗೌರವಕ್ಕೆ ಅರ್ಹ ಎನಿಸಿದವರಿಗಷ್ಟೇ ಗೌರವ ಕೊಡಲಿಕ್ಕೆ ಮನಸ್ಸು ಒಪ್ಪುತ್ತೆ ಹೊರತು , ಬಲವಂತವಾಗಿ ಗೌರವಕ್ಕಾಗಿ ಅನಾಚಾರಗಳನ್ನೇ ಮಾಡುತ್ತಾ , ತಮ್ಮ ಸ್ವಾರ್ಥಕ್ಕಾಗಿ ಇತರರನ್ನ ಹಿಂಸಿಸುತ್ತಾ , ತಾನೇ ಸುಪ್ರೀಮ್ ಅಂತ ತೋರಿಸಿಕೊಳ್ಳುವವರಿಗೆ ಗೌರವ ಕೊಡಲು ಇಷ್ಟವಾಗಲ್ಲ.. ಆದ್ರು ಅನಿವಾರ್ಯ ಅವರನ್ನ ಬಲವಂತವಾಗಿಯೋ ನಾಟಕೀಯವಾಗಿಯೋ ಗೌರವಿಸುತ್ತೇವೆ..
ಆದರೆ,,, ನಿನ್ನ ಆತ್ಮ ಗೌರವಕ್ಕೆ ಧಕ್ಕೆ ಬಂದಾಗಲೂ ನೀನು ಇತರರ ಆತ್ಮಗೌರವಕ್ಕೋಸ್ಕರ ತಲೆಬಾಗಿದರೆ , ನಿನ್ನ ದೃಷ್ಟಿಯಲ್ಲಿ ನೀನೇ ಬಿದ್ದುಬಿಡುವೆ ನೆನಪಪಿರಲಿ, ನಿನ್ನ ಆತ್ಮಗೌರಕ್ಕಿಂತ ಯಾವುದೂ ದೊಡ್ಡದಲ್ಲ ಯಾರೂ ದೊಡ್ಡವರಲ್ಲ.. ನಿನ್ನ self rescpect ಗೆ ಧಕ್ಕೆ ಆದ್ರೆ ಯಾರಿಗೂ ಮರ್ಯಾದೆ ಕೊಡುವ ಅವಶ್ಯತೆ ಇಲ್ಲ..








