ಮಂಗಳೂರು ಬಿಸ್ಕೂಟ್ ಅಂಬಡೆ Mangalore biscuit ambade recipes
ಬೇಕಾಗುವ ಸಾಮಗ್ರಿಗಳು:
1¼ ಕಪ್ ಸ್ವಚ್ಛಗೊಳಿಸಿದ ಉದ್ದಿನ ಬೇಳೆ
ನುಣ್ಣಗೆ ಕತ್ತರಿಸಿದ 2 – 3 ಹಸಿರು ಮೆಣಸಿನಕಾಯಿಗಳು
ಸಣ್ಣದಾಗಿ ಕತ್ತರಿಸಿದ 1 ಇಂಚಿನ ಶುಂಠಿ ತುಂಡು
ಕರಿಬೇವಿನ ಸೊಪ್ಪು ಸುಮಾರು 10 – 12 ಎಲೆಗಳು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. Mangalore biscuit ambade recipes
1/2 ಟೀಸ್ಪೂನ್ ತಾಜಾ ಕರಿಮೆಣಸು ಹುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ತುರಿದ ಕೊಬ್ಬರಿ
ಹುರಿಯಲು ಸಾಕಷ್ಟು ಎಣ್ಣೆ
ಮಾಡುವ ವಿಧಾನ :
ಸ್ವಚ್ಛಗೊಳಿಸಿದ ಉದ್ದಿನ ಬೇಳೆಯನ್ನು ಕನಿಷ್ಠ 2 – 3 ಗಂಟೆಗಳ ಕಾಲ ನೆನೆಸಿ, ನಂತರ ನೀರನ್ನು ಬಸಿಯಿರಿ.
ಬ್ಲೆಂಡರ್ ಅಥವಾ ಗ್ರೈಂಡರ್ನಲ್ಲಿ, ಉದ್ದಿನ ಬೇಳೆಯನ್ನು ಉಪ್ಪಿನೊಂದಿಗೆ ಹೆಚ್ಚು ನೀರು ಸೇರಿಸದೆ ಚೆನ್ನಾಗಿ ರುಬ್ಬಿ.
ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕರಿಮೆಣಸು ಹುಡಿ ಮತ್ತು ಕೊಬ್ಬರಿ ತುರಿ ಉದ್ದಿನ ಬೇಳೆ ಹಿಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 30 ನಿಮಿಷಗಳ ಕಾಲ ಹಾಗೆ ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . (ಹಿಟ್ಟಿಗೆ ನೀರು ಹೆಚ್ಚಾದರೆ ಅಕ್ಕಿ ಹುಡಿ ಸೇರಿಸಿಕೊಳ್ಳಬಹುದು) ಈಗ ದೊಡ್ಡ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ಆಳವಾದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಹುರಿಯಿರಿ. ಎರಡೂ ಬದಿಯೂ ಹೊಂಬಣ್ಣಕ್ಕೆ ಬರುವವರೆಗೆ ಗರಿಗರಿಯಾಗುವವರೆಗೆ ಹುರಿದು ತೆಗೆಯಿರಿ. ಮಂಗಳೂರು ಬಿಸ್ಕೂಟ್ ಅಂಬಡೆ ರೆಡಿಯಾಗಿದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ