ರವೆ ಹೆಸರುಬೇಳೆ ಪಾಯಸ
Saakshatv cooking recipes payasa
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ 1/2 ಕಪ್
ನೀರು 4 3/4 ಕಪ್
ರವೆ 1/4 ಕಪ್
ಬೆಲ್ಲ 3/4 ಕಪ್,
ಒಣ ಕೊಬ್ಬರಿ ತುರಿ 1/4 ಕಪ್,
ಹಾಲು 1/2 ಕಪ್,
ಹುರಿದ ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ
Saakshatv cooking recipes payasa

ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹೆಸರುಬೇಳೆಯನ್ನು ಒಂದೆರಡು ಬಾರಿ ತೊಳೆದು 4 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿ.
ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದಿಟ್ಟುಕೊಳ್ಳಿ.
ನಂತರ ಬಾಣಲೆಗೆ ರವೆ ಹಾಕಿ ಕೆಂಪು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.
ನಂತರ ರವೆಯನ್ನು ಮುಕ್ಕಾಲು ಕಪ್ ಬಿಸಿ ನೀರಿಗೆ ಸೇರಿಸಿ, ಗಂಟು ಕಟ್ಟದಂತೆ ನೋಡಿಕೊಳ್ಳಿ.
ನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಕರಗಿಸಿಟ್ಟುಕೊಂಡ ಬೆಲ್ಲವನ್ನು ಸಹ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣವು ಒಂದು ಕುದಿ ಬಂದ ನಂತರ ಒಣ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.

ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ. ಈಗ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ ಒಂದು ಕುದಿ ಬರೆಸಿ. ರುಚಿಯಾದ ರವೆ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
https://twitter.com/SaakshaTv/status/1367307484751400961?s=19
https://twitter.com/SaakshaTv/status/1364735583990538241?s=19
https://twitter.com/SaakshaTv/status/1364781302864560131?s=19








