ಮಂಗಳೂರು ಅಕ್ಕಿ ಪುಂಡಿ Saakshatv cooking recipes rice ball
ಪುಂಡಿಯನ್ನು ಎರಡು ವಿಧಾನದಲ್ಲಿ ಮಾಡಬಹುದು.ಮೊದಲನೆಯ ವಿಧಾನ ಅಕ್ಕಿ ನೆನೆಸಿ,ರುಬ್ಬಿ, ಹಿಟ್ಟನ್ನು ತಯಾರು ಮಾಡಿಕೊಂಡು ನಂತರ ಸಣ್ಣ ಉರಿಯಲ್ಲಿ ಬೇಯಿಸುತ್ತ ಮಿಶ್ರಣವನ್ನು ದಪ್ಪವಾಗಿಸುವುದು.ನಂತರ ಆ ಮಿಶ್ರಣದಿಂದ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸುವುದು. ಇನ್ನೊಂದು ವಿಧಾನವೆಂದರೆ ಅಕ್ಕಿಯನ್ನು ನೆನೆಸಿ ರುಬ್ಬುವ ಬದಲು ಅಕ್ಕಿ ರವೆಯನ್ನು ಬಳಸುವುದು. ಇಂದು ನಾವು ಅಕ್ಕಿ ರವೆಯಲ್ಲಿ ಪುಂಡಿ ಮಾಡುವ ವಿಧಾನ ತಿಳಿಯೋಣ. Saakshatv cooking recipes rice ball
ಬೇಕಾಗುವ ಸಾಮಗ್ರಿಗಳು
3 ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನ ಬೇಳೆ
1/4 ಟೀಸ್ಪೂನ್ ಮೆಂತೆ
2 ತುಂಡು ಮಾಡಿದ ಒಣಗಿದ ಕೆಂಪು ಮೆಣಸಿನಕಾಯಿ,
ಕೆಲವು ಕರಿಬೇವಿನ ಸೊಪ್ಪುಗಳು
1 ಕಪ್ ಹುರಿದ ಇಡ್ಲಿ ರವಾ / ಅಕ್ಕಿ ರವಾ
1/2 ಕಪ್ ತುರಿದ ತೆಂಗಿನಕಾಯಿ
ರುಚಿಗೆ ತಕ್ಕಷ್ಟು ಉಪ್ಪು
3 ಕಪ್ ಕುದಿಯುವ ನೀರು
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಮೆಂತ್ಯ, ತುಂಡು ಮಾಡಿದ ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
ನಂತರ ಎಲ್ಲ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ಹಾಕಿ ಇಡಿ.
ಇನ್ನೊಂದು ಪಾತ್ರೆಯಲ್ಲಿ ಎರಡೂವರೆ ಕಪ್ ನೀರು ತೆಗೆದುಕೊಂಡು, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿ ಬರಿಸಿ. ಈಗ ಹುರಿದಿಟ್ಟ ಸಾಮಾಗ್ರಿ, ಹುರಿದಿಟ್ಟ ರವೆಯನ್ನು ಸಣ್ಣ ಉರಿಯಲ್ಲಿ ಕಲಕುತ್ತ ಬೇಯಿಸಿ. ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ. ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಕಲಸಿ. ಈಗ ಮಿಶ್ರಣವು ದಪ್ಪವಾಗುತ್ತದೆ. ಮಿಶ್ರಣವು ಬೆಚ್ಚಗಾಗಿ ಇರುವಾಗಲೇ, ಉಂಡೆಗಳನ್ನು ತಯಾರಿಸಿ.
ಇಡ್ಲಿ ಸ್ಟೀಮರ್ ನಲ್ಲಿ ನೀರನ್ನು ಕುದಿಯಲು ಇಟ್ಟು ಅದರೊಳಗೆ ಒಂದು ತಟ್ಟೆಯನ್ನು ಇಡಿ. ಅಂಟದಂತೆ ತಟ್ಟೆಗೆ ಎಣ್ಣೆ ಸವರಿ ಅದರಲ್ಲಿ ಪುಂಡಿಗಳನ್ನು ಇಡಿ.
15 ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಅವಿಯಲ್ಲಿ ಬೇಯಿಸಿ. ಈಗ ರುಚಿಯಾದ ಅಕ್ಕಿ ಪುಂಡಿ ತಯಾರಾಗಿದೆ. ಇದನ್ನು ಚಟ್ನಿ ಜೊತೆಗೆ ಸೇವಿಸಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ಪ್ರತಿದಿನ ಬೆಳಿಗ್ಗೆ ನಿಂಬೆ ರಸ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/vDadOmnHSd
— Saaksha TV (@SaakshaTv) February 15, 2021
ಪಾಸ್ಟ್ಯಾಗ್‌ಗಳಿಂದ ಡಬಲ್ ಹಣ ಕಡಿತಗೊಳಿಸಿದರೆ ಏನು ಮಾಡಬೇಕು? https://t.co/TA0xAI07Rl
— Saaksha TV (@SaakshaTv) February 19, 2021