ಶೀತ, ನೆಗಡಿ, ವೈರಲ್ ಜ್ವರಕ್ಕೆ ಪರಿಣಾಮಕಾರಿ ಕಷಾಯಗಳು
ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಕಷಾಯ ಹೆಚ್ಚು ಪ್ರಯೋಜನಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಕಷಾಯಗಳು ಇಲ್ಲಿದೆ. ಇವು ಶೀತ, ನೆಗಡಿ, ಜ್ವರ, ಎದೆ ನೋವು ಇತ್ಯಾದಿಗೆ ಸಹಕಾರಿಯಾಗಿದೆ.
ತುಳಸಿ ಕಷಾಯ :
ಬೇಕಾಗುವ ಸಾಮಗ್ರಿಗಳು
100 ಗ್ರಾಂ ತುಳಸಿ,
10 ಗ್ರಾಂ ದಾಲ್ಚಿನ್ನಿ,
10 ಗ್ರಾಂ ಬೇವಿನ ಎಲೆ,
50 ಗ್ರಾಂ ಸೋಂಪು,
15 ಗ್ರಾಂ ಸಣ್ಣ ಏಲಕ್ಕಿ,
10 ಗ್ರಾಂ ಕರಿಮೆಣಸು
ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಹುಡಿ ಮಾಡಿ ಇಡಿ. ನಂತರ ಪಾತ್ರೆಯಲ್ಲಿ ಎರಡು ಕಪ್ ನೀರನ್ನು ಸೇರಿಸಿ. ನೀರು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಅರ್ಧ ಚಮಚ ಹುಡಿ ಮಾಡಿದ ಮಿಶ್ರಣವನ್ನು ಸೇರಿಸಿ. ಪುನಃ ಚೆನ್ನಾಗಿ ಕುದಿಸಿ.
ನಂತರ ಸೋಸಿ, ಬಿಸಿಯಾಗಿರುವಾಗಲೇ ಈ ಕಷಾಯವನ್ನು ಸೇವಿಸಿ.

ಲವಂಗ, ತುಳಸಿ, ಕಾಳು ಮೆಣಸು, ಶುಂಠಿ ಕಷಾಯ :
ಬೇಕಾಗುವ ಸಾಮಗ್ರಿಗಳು
2 ಕಪ್ ನೀರು,
7-8 ತುಳಸಿ ಎಲೆಗಳು,
5 ಕರಿಮೆಣಸು,
5 ಲವಂಗ
ಒಂದು ಚಮಚ ತುರಿದ ಶುಂಠಿ
ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ 8-10 ನಿಮಿಷಗಳ ಕಾಲ ಕುದಿಸಿ. ನಂತರ ಸೋಸಿ. ಬೆಚ್ಚಗಿರುವಾಗಲೇ ಈ ಕಷಾಯವನ್ನು ಕುಡಿಯಿರಿ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇದನ್ನು ಕುಡಿಯುವುದರಿಂದ ನೆಗಡಿ ಮತ್ತು ಎದೆ ನೋವು ಕಡಿಮೆಯಾಗುತ್ತದೆ. ಇದು ಗಂಟಲು ನೋವು ಜೀರ್ಣಕ್ರಿಯೆಗೆ ಕೂಡ ಪರಿಣಾಮಕಾರಿ.
ಏಲಕ್ಕಿ, ಜೇನು ತುಪ್ಪದ ಕಷಾಯ :
ಬೇಕಾಗುವ ಸಾಮಗ್ರಿಗಳು
1 ಚಮಚ ಏಲಕ್ಕಿ ಪುಡಿ
2 ಕಪ್ ನೀರು
ಏಲಕ್ಕಿ ಪುಡಿಯನ್ನು ಎರಡು ಕಪ್ ನೀರಿಗೆ ಸೇರಿಸಿ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸೋಸಿ, ತಣ್ಣಗಾಗಲು ಬಿಡಿ. ಬಳಿಕ ಜೇನುತುಪ್ಪ ಸೇರಿಸಿ ಕುಡಿಯಿರಿ.
ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಇದು ಪರಿಣಾಮಕಾರಿ.
ಲವಂಗ, ತುಳಸಿ, ಬ್ಲಾಕ್ ಸಾಲ್ಟ್ ಕಷಾಯ :
2 ಕಪ್ ನೀರು,
8-10 ತುಳಸಿ ಎಲೆಗಳು,
5 ಲವಂಗ
ಬ್ಲಾಕ್ ಸಾಲ್ಟ್ ರುಚಿಗೆ ತಕ್ಕಷ್ಟು
ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಪಾತ್ರೆಯಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಆಗುವವರೆಗೆ ಕುದಿಸಿ. ನಂತರ ಸೋಸಿ ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಸೇರಿಸಿ ಸೇವಿಸಿ. ಈ ಕಷಾಯವು ಕೀಲು ನೋವಿಗೆ ಪರಿಣಾಮಕಾರಿಯಾಗಿದೆ.
ವೈರಲ್ ಜ್ವರಕ್ಕೆ ಪರಿಣಾಮಕಾರಿ ಕಷಾಯ
1 ಏಲಕ್ಕಿ,
1 ದಾಲ್ಚಿನಿ ತುಂಡು,
5 ಕರಿಮೆಣಸು,
3 ಲವಂಗ,
1/2 ಚಮಚ ಅಜ್ವೈನ್,
1 ಚಿಟಕಿ ಅರಿಶಿನ
11/2 ಕಪ್ ನೀರು
ಒಂದು ಪಾತ್ರೆಯಲ್ಲಿ ಏಲಕ್ಕಿ, ದಾಲ್ಚಿನಿ ತುಂಡು, ಕರಿಮೆಣಸು, ಲವಂಗ, ಅಜ್ವೈನ್ ಗಳನ್ನು ತೆಗೆದುಕೊಳ್ಳಿ. ಇದಕ್ಕೆ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಇದು ಅರ್ಧದಷ್ಟು ಆದಾಗ ಅದಕ್ಕೆ ಅರಿಶಿನ ಸೇರಿಸಿ ಚೆನ್ನಾಗಿ ಬೆರೆಸಿ ಸೋಸಿ, ಬೆಚ್ಚಗಿರುವಾಗಲೇ ಕುಡಿಯಿರಿ.
ವೈರಲ್ ಜ್ವರದಂತಹ ಸಮಸ್ಯೆಗೆ ಈ ಕಷಾಯವು ಪರಿಣಾಮಕಾರಿಯಾಗಿದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಸೇವನೆಯ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
ವಾಟ್ಸಾಪ್ ಮೂಲಕ ವ್ಯಾಕ್ಸಿನೇಷನ್ ಸೆಂಟರ್ ಅನ್ನು ಹೇಗೆ ಕಂಡುಹಿಡಿಯಬಹುದು ?#Covid #VaccinationCenter #WhatsApp https://t.co/2yTqNJTvY2
— Saaksha TV (@SaakshaTv) May 7, 2021
https://twitter.com/SaakshaTv/status/1391245034570268673?s=19
https://twitter.com/SaakshaTv/status/1390506933489180675?s=19
https://twitter.com/SaakshaTv/status/1390494846192922625?s=19
#Saakshatv #healthtips #kashaya








