ಹೆಸರು ಬೇಳೆಯ ಆರೋಗ್ಯ ಪ್ರಯೋಜನಗಳು
ಭಾರತೀಯ ಆಹಾರದಲ್ಲಿ ಹೆಸರು ಬೇಳೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ದ್ವಿದಳ ಧಾನ್ಯಗಳು ಪ್ರೋಟೀನ್ ಮತ್ತು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿವೆ.
ಆದರೆ ಹೆಸರು ಬೇಳೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ‘ಎ’, ‘ಬಿ’, ‘ಸಿ’ ಮತ್ತು ‘ಇ’ ಸಮೃದ್ಧವಾಗಿದೆ.
ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಮೊಳಕೆಯೊಡೆದ ಬೇಳೆಯನ್ನು ಬೆಳಿಗ್ಗೆ ತಿನ್ನುವುದರಿಂದ, ಅದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ಅಮೈನೋ ಆಸಿಡ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ದೇಹವನ್ನು ಹಲವು ಗಂಭೀರ ರೋಗಗಳಿಂದ ರಕ್ಷಿಸುತ್ತದೆ.

ಹೆಸರು ಬೇಳೆಯಲ್ಲಿರುವ ಪೋಷಕಾಂಶಗಳು
ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಬಿ 9, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 4, ರಂಜಕ, ಪೊಟ್ಯಾಸಿಯಮ್, ಸತು, ಕಬ್ಬಿಣ, ವಿಟಮಿನ್ ಬಿ 2, ಬಿ 3, ಬಿ 5, ಬಿ 6 ಹೆಸರು ಬೇಳೆಯಲ್ಲಿ ಕಂಡುಬರುತ್ತವೆ. ಇದನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲ ಎಂದು ಪರಿಗಣಿಸಲಾಗಿದೆ.
ಹೆಸರು ಬೇಳೆ ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು. ಇದು ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದರ ಸೇವನೆಯಿಂದಾಗಿ, ಹಸಿವಿನ ಹಾರ್ಮೋನುಗಳು ಅಷ್ಟು ಸಕ್ರಿಯವಾಗಿರುವುದಿಲ್ಲ ಮತ್ತು ಹೊಟ್ಟೆ ತುಂಬ ಹೊತ್ತು ತುಂಬಿರುವಂತೆ ಅನಿಸುತ್ತದೆ.
ರಕ್ತದೊತ್ತಡವನ್ನು ಸರಿಯಾಗಿ ಇರಿಸುತ್ತದೆ
ಹೆಸರು ಬೇಳೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ, ಮೆಗ್ನೀಸಿಯಮ್ ಮತ್ತು ಫೈಬರ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಉಪಯುಕ್ತವಾಗಿದೆ.
ಹೊಟ್ಟೆಗೆ ಪ್ರಯೋಜನಕಾರಿ
ಹೆಸರು ಬೇಳೆಯಲ್ಲಿರುವ ಫೈಬರ್ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಕಾರ್ಬ್ ಇತರ ವಸ್ತುಗಳಿಗಿಂತ ಹೆಚ್ಚು ಆರೋಗ್ಯಕರವಾಗಿದ್ದು, ಇದು ಹೊಟ್ಟೆಯನ್ನು ನಿರ್ವಿಷಗೊಳಿಸಲು ಮತ್ತು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಹೆಸರು ಬೇಳೆ ಈ ರೋಗಗಳಿಂದ ರಕ್ಷಿಸುತ್ತದೆ
ವಿವಿಧ ರೀತಿಯ ಉತ್ಕರ್ಷಣ ನಿರೋಧಕ ಅಂಶಗಳು ಹೆಸರು ಬೇಳೆಯಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಅತಿಯಾದ ಫ್ರಿ ರಾಡಿಕಲ್‌ಗಳು ದೇಹದಲ್ಲಿ ಕ್ಯಾನ್ಸರ್, ಉರಿಯೂತ, ಹೃದ್ರೋಗ ಮುಂತಾದ ಸಮಸ್ಯೆಗಳಿಗೆ ಕಾರಣವಾಗಿದೆ.
ಹೃದಯವನ್ನು ಚೆನ್ನಾಗಿ ಇರಿಸುತ್ತದೆ
ಸಂಶೋಧನೆಯ ಪ್ರಕಾರ, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನೆರವಾಗುತ್ತದೆ. ಈ ಕಾರಣದಿಂದಾಗಿ ಹೃದಯದ ತೊಂದರೆಗಳನ್ನು ದೂರವಿರಿಸಲು ಇದನ್ನು ಸೇವಿಸುವುದು ಒಳ್ಳೆಯದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ#Saakshatv #healthtips #Eatingcarrots https://t.co/c6YE6FC3nX
— Saaksha TV (@SaakshaTv) August 21, 2021
ಈ ಆಹಾರ ಪದಾರ್ಥಗಳನ್ನು ಸೇವಿಸುವಾಗ ಎಚ್ಚರಿಕೆ ಇರಲಿ#Saakshatv #healthtipspoison https://t.co/ixY1mPbnPj
— Saaksha TV (@SaakshaTv) August 22, 2021
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್#Saakshatv #cookingrecipe https://t.co/zXFiNh1Lga
— Saaksha TV (@SaakshaTv) August 22, 2021
ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ#familypension https://t.co/723113WFH1
— Saaksha TV (@SaakshaTv) August 22, 2021
ಉದ್ದಿನ ವಡೆ#Saakshatv #cookingrecipe #uddinavade https://t.co/t6kuH0m3kH
— Saaksha TV (@SaakshaTv) August 21, 2021
#Saakshatv #healthtips #healthbenefits #moongdal








