ಬೆಲ್ಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ಹೆಚ್ಚಿಸಲು ಕೂಡ ನೆರವಾಗುತ್ತದೆ
ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಕೆಮ್ಮು ಮತ್ತು ಶೀತವನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಬೆಲ್ಲದ ಬಳಕೆಯು ಚರ್ಮವನ್ನು ಸುಧಾರಿಸುವಲ್ಲಿ ಮತ್ತು ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.
ಬೆಲ್ಲದ ಸೌಂದರ್ಯ ಪ್ರಯೋಜನಗಳು

ವಿಟಮಿನ್ -ಎ ಮತ್ತು ವಿಟಮಿನ್ -ಬಿ, ಸುಕ್ರೋಸ್, ಗ್ಲೂಕೋಸ್, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸತು, ಮೆಗ್ನೀಸಿಯಮ್ ಅಂಶಗಳು ಬೆಲ್ಲದಲ್ಲಿ ಕಂಡುಬರುತ್ತವೆ. ಇದರಲ್ಲಿ ರಂಜಕದ ಅಂಶ ಅಧಿಕವಾಗಿದೆ. ಬೆಲ್ಲದಲ್ಲಿ ಅನೇಕ ಅಗತ್ಯ ಖನಿಜಗಳು ಮತ್ತು ವಿಟಮಿನ್‌ಗಳಿವೆ. ಇದು ಚರ್ಮಕ್ಕೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಅದು ದೇಹವನ್ನು ಒಳಗಿನಿಂದ ಸ್ವಚ್ಛವಾಗಿಡುತ್ತದೆ. ಇದು ಚರ್ಮದ ಹೊಳಪಿಗೆ ಕೂಡ ಬಹಳ ಮುಖ್ಯ. ಬೆಲ್ಲವು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉಗುರುಬೆಚ್ಚನೆಯ ನೀರು ಅಥವಾ ಚಹಾದಲ್ಲಿ ಸಕ್ಕರೆಯ ಬದಲು, ಬೆಲ್ಲವನ್ನು ಬೆರೆಸಿ ಕುಡಿಯುವುದು ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಕಾಪಾಡುತ್ತದೆ.
ಬೆಲ್ಲದ ಪ್ಯಾಕ್ ತಯಾರಿಸಲು, 1 ಚಮಚ ಬೆಲ್ಲದ ಪುಡಿಯನ್ನು ತೆಗೆದುಕೊಂಡು ಅದರಲ್ಲಿ 1 ಚಮಚ ಟೊಮೆಟೊ ರಸ, ನಿಂಬೆ ರಸ ಮತ್ತು ಒಂದು ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
1 ಟೀಸ್ಪೂನ್ ಬ್ಲಾಕ್ ಚಹಾ, 1 ಟೀಸ್ಪೂನ್ ದ್ರಾಕ್ಷಿಹಣ್ಣಿನ ರಸ, ಒಂದು ಚಿಟಿಕೆ ಅರಿಶಿನ ಮತ್ತು ಸ್ವಲ್ಪ ರೋಸ್ ವಾಟರ್ ಅನ್ನು 1 ಟೀಸ್ಪೂನ್ ಬೆಲ್ಲದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಧುಮೇಹ ರೋಗಿಗಳಿಗೆ ಮೆಂತ್ಯ ಹೇಗೆ ಪ್ರಯೋಜನಕಾರಿ ಗೊತ್ತಾ? https://t.co/VxXUNNDW7I
— Saaksha TV (@SaakshaTv) August 19, 2021
ಧಿಡೀರ್ ಟೊಮೆಟೊ ದೋಸೆ#Saakshatv #cookingrecipe #tomatodosa https://t.co/sCCsSKHtg9
— Saaksha TV (@SaakshaTv) August 19, 2021
ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸದಿರಲು ಕಾರಣವೇನು ಗೊತ್ತಾ? https://t.co/lw1zFj9ipp
— Saaksha TV (@SaakshaTv) August 19, 2021
ಬೆಲ್ಲದ ಸೇವನೆ ಯಾವ ಸಮಸ್ಯೆ ಇರುವವರಿಗೆ ಹಾನಿಕರ?#Saakshatv #healthtips #Jaggery https://t.co/UHhshvXj6W
— Saaksha TV (@SaakshaTv) August 18, 2021
#Saakshatvhealthtips #jaggery








