ಮೂತ್ರಪಿಂಡ ವೈಫಲ್ಯಕ್ಕೆ ಕಾರಣವೇನು ಮತ್ತು ಇದರ ಲಕ್ಷಣಗಳೇನು?
ಮೂತ್ರಪಿಂಡವು ದೇಹದ ಪ್ರಮುಖ ಭಾಗವಾಗಿದೆ. ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ದೇಹಕ್ಕೆ ಅಪಾಯಕಾರಿಯಾಗಿದೆ. ಏಕೆಂದರೆ ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತವೆ. ನಮ್ಮ ಎರಡು ಮೂತ್ರಪಿಂಡಗಳಲ್ಲಿ ಲಕ್ಷಾಂತರ ಸಣ್ಣ ಫಿಲ್ಟರ್ಗಳಿವೆ. ಇದನ್ನು ನೆಫ್ರಾನ್ಗಳು ಎಂದು ಕರೆಯಲಾಗುತ್ತದೆ. ನಮ್ಮ ರಕ್ತವನ್ನು ಸ್ವಚ್ಛಗೊಳಿಸಲು ನೆರೋಫೇನ್ ಕೆಲಸ ಮಾಡುತ್ತದೆ. ಮೂತ್ರಪಿಂಡಗಳಲ್ಲಿನ ಈ ಶುದ್ಧೀಕರಣ ವ್ಯವಸ್ಥೆಯಿಂದಾಗಿ, ಹಾನಿಕಾರಕ ವಸ್ತುಗಳು ನಮ್ಮ ದೇಹದಿಂದ ಮೂತ್ರದ ಮುಖಾಂತರ ಹೊರಬರುತ್ತವೆ.

ಮೂತ್ರಪಿಂಡಗಳಲ್ಲಿ ವೈಫಲ್ಯಗಳಲ್ಲಿ ಎರಡು ರೀತಿ ಇದೆ.
ತಾತ್ಕಾಲಿಕ ಮೂತ್ರಪಿಂಡ ವೈಫಲ್ಯ ಅಂದರೆ ತಾತ್ಕಾಲಿಕವಾಗಿ ಮೂತ್ರಪಿಂಡ ಮುಚ್ಚುವುದು.
ಈ ಸಮಸ್ಯೆಯನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ಗುಣಪಡಿಸಲಾಗುತ್ತದೆ. ಇದಕ್ಕೆ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿಯ ಅಗತ್ಯವಿಲ್ಲ. ತಾತ್ಕಾಲಿಕ ಮೂತ್ರಪಿಂಡ ವೈಫಲ್ಯಕ್ಕೆ ಅತಿಸಾರವು ಸಾಮಾನ್ಯ ಕಾರಣವಾಗಿದೆ. ದೇಹದಿಂದ ನೀರು ಬಿಡುಗಡೆಯಾದಾಗ ಅತಿಸಾರದಿಂದ ಮೂತ್ರಪಿಂಡ ಹಾನಿಯಾಗುತ್ತದೆ. ಇದಲ್ಲದೆ, ತಾತ್ಕಾಲಿಕ ಮೂತ್ರಪಿಂಡ ವೈಫಲ್ಯಕ್ಕೆ ಔಷಧಿಗಳು (ವಿಶೇಷವಾಗಿ ಪೈನ್ ಕಿಲ್ಲರ್ ಮತ್ತು ಪ್ರತಿಜೀವಕಗಳು) ಸಹ ಕಾರಣವಾಗಿರುತ್ತದೆ.
ದೀರ್ಘಕಾಲದ ಮೂತ್ರಪಿಂಡ ವೈಫಲ್ಯ – ಇದರಲ್ಲಿ ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿರುತ್ತದೆ. ಅದರ ಚಿಕಿತ್ಸೆಗೆ ಕೇವಲ ಎರಡು ಆಯ್ಕೆಗಳಿವೆ. ಒಂದು ಮೂತ್ರಪಿಂಡದ ಕಸಿ ಪಡೆಯುತ್ತೀರಿ, ಅಥವಾ ಜೀವನದುದ್ದಕ್ಕೂ ಡಯಾಲಿಸಿಸ್ನಲ್ಲಿರಬೇಕು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮುಖ್ಯ ಕಾರಣಗಳಾಗಿವೆ.
ಮೂತ್ರಪಿಂಡ ವೈಫಲ್ಯದ ಲಕ್ಷಣಗಳು –
ಕೈ ಮತ್ತು ಕಾಲುಗಳಲ್ಲಿ ಊತ ಉಂಟಾಗುತ್ತದೆ.
ಮೂಳೆ ನೋವು, ರಕ್ತದೊತ್ತಡ ಹೆಚ್ಚಾಗುತ್ತದೆ.
ದೌರ್ಬಲ್ಯ, ವಾಕರಿಕೆ ಮತ್ತು ವಾಂತಿ .
ರೋಗ ಮುಂದುವರೆದಂತೆ, ಉಸಿರಾಡಲು ತೊಂದರೆ ಆಗುತ್ತದೆ.
ನಿದ್ರೆ ಭಾವನೆ.
ಮೂತ್ರಪಿಂಡ ವೈಫಲ್ಯ ತಡೆಗಟ್ಟಲು :
ಆರೋಗ್ಯವಂತ ಜನರು ಪ್ರತಿದಿನ ಎರಡರಿಂದ ನಾಲ್ಕು ಲೀಟರ್ ನೀರು ಅಥವಾ ದ್ರವ ಪದಾರ್ಥ ಸೇವಿಸಬೇಕು. ಜೊತೆಗೆ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಜನರು ನೆಫ್ರಾಲಜಿಸ್ಟ್ ಅವರೊಂದಿಗೆ ಸಮಾಲೋಚಿಸಿ ನೀರು ಮತ್ತು ಇತರ ದ್ರವಗಳನ್ನು ಸೇವಿಸಬೇಕು. ಸಾಕಷ್ಟು ಪ್ರಮಾಣದ ದ್ರವಗಳನ್ನು ಸೇವಿಸುವುದರಿಂದ ಮೂತ್ರಪಿಂಡಗಳು ದೇಹದಿಂದ ಸೋಡಿಯಂ, ಯೂರಿಯಾ ಮತ್ತು ಇತರ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಮೂತ್ರಪಿಂಡಗಳು ದುರ್ಬಲಗೊಂಡಾಗ, ದೇಹದಲ್ಲಿನ ಯೂರಿಯಾ ಮತ್ತು ಇತರ ಹಾನಿಕಾರಕ ಅಂಶಗಳ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಮಟ್ಟವನ್ನು ಕಡಿಮೆ ಮಾಡಲು ಪ್ರೋಟೀನ್ ಸೇವನೆಯನ್ನು ಕಡಿಮೆ ಮಾಡಬೇಕು. ಚೀಸ್, ಬೇಳೆಕಾಳುಗಳು, ಬೀನ್ಸ್, ಸೋಯಾಬೀನ್ ಮತ್ತು ಮಾಂಸಾಹಾರಿ ಆಹಾರಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ.
5 ಗ್ರಾಂ (ಒಂದು ಟೀಸ್ಪೂನ್) ಉಪ್ಪನ್ನು ಮಾತ್ರ ವಿವಿಧ ಆಹಾರ ಮತ್ತು ಪಾನೀಯಗಳ ಮೂಲಕ ಪ್ರತಿದಿನ ಸೇವಿಸಬೇಕು. ಇದಕ್ಕಿಂತ ಹೆಚ್ಚು ಉಪ್ಪು ತೆಗೆದುಕೊಳ್ಳಬೇಡಿ.
ಧೂಮಪಾನವು ಮೂತ್ರಪಿಂಡದಲ್ಲಿ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಕಡಿಮೆ ರಕ್ತ ಮೂತ್ರಪಿಂಡವನ್ನು ತಲುಪಿದಾಗ, ಅವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಧೂಮಪಾನವು ಮೂತ್ರಪಿಂಡದ ಕ್ಯಾನ್ಸರ್ ಅಪಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು, ವೈದ್ಯರೊಂದಿಗೆ ಸಮಾಲೋಚಿಸಿ ಔಷಧಿಗಳನ್ನು ತೆಗೆದುಕೊಳ್ಳಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು ನೆರವಾಗುವ ಕೆಲವು ಪಾನೀಯಗಳು#Saakshatv #healthtips https://t.co/EbD8VICuc5
— Saaksha TV (@SaakshaTv) June 17, 2021
ಸಬ್ಬಕ್ಕಿ – ಹೆಸರುಬೇಳೆ ದೋಸೆ#Saakshatv #cookingrecipe https://t.co/Cx5YU1j8WT
— Saaksha TV (@SaakshaTv) June 17, 2021
ಕರಿಬೇವಿನ ರಸದ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ#Saakshatv #healthtips #Curryleaf https://t.co/QQY8qIJF5K
— Saaksha TV (@SaakshaTv) June 18, 2021
ಧೂರ್ತ ರಾಜಕೀಯದ ಹುಸಿ ವಿಕಾಸವಾದದ ಭೂತಕುಣಿತಕ್ಕೆ ಬಲಿಯಾಗುವ ಶೇರ್ನಿ; ಒಂದು ಮನಕಲಕುವ ಕಥಾನಕವುಳ್ಳ ಸಿನಿಮಾ:#Marjalamanthana #Sherni movie https://t.co/Qf33MG7bF0
— Saaksha TV (@SaakshaTv) June 19, 2021
#Saakshatv #healthtips #kidneydisease








