ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಗಾಳಿ ಮಳೆ..
ದಕ್ಷಿಣ ಕನ್ನಡ, ಜಿಲ್ಲೆಯ ಹಲವೆಡೆ ರವಿವಾರ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.
ಪುತ್ತೂರು, ಬಂಟ್ವಾಳ, ಬಿ.ಸಿ.ರೋಡ್, ಸುಳ್ಯ,ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಆಲಂಕಾರು ಉಪ್ಪಿನಂಗಡಿ ಸೇರಿದಂತೆ ಕೆಲವೆಡೆ ಗಾಳಿ ಮಳೆ ಸುರಿದಿದೆ. ಕೆಲವೆಡೆ ಕಟ್ಟಡದ ಛಾವಣಿಯ ಹೆಂಚುಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. 10ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಉಪ್ಪಿನಂಗಡಿ-ಅಂಡೆತಡ್ಕ ಮಾರ್ಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದು ಸ್ವಲ್ಪಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉಪ್ಪಿನಂಗಡಿ, ಇಳಂತಿಲ, ರಾಮಕುಂಜ ಮುಂತಾದೆಡೆ ವಿದ್ಯುತ್ ವ್ಯತ್ಯಯ ಗೊಂಡಿದೆ.
ಉಡುಪಿ ಜಿಲ್ಲೆಯ ವಿವಿಧೆಡೆ ರವಿವಾರ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಶಿರೂರು, ಬೈಂದೂರು, ಕೊಲ್ಲೂರು, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರ ನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಉಳ್ಳೂರು – 74, ಕುಂದಾಪುರ, ಬಸ್ರೂರು, ತೆಕ್ಕಟ್ಟೆ, ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಬೀಟ್ರೂಟ್ ಜ್ಯೂಸ್ ನ ಆರೋಗ್ಯ ಪ್ರಯೋಜನಗಳು#saakshatv #healthtips #Beetrootjuice https://t.co/jmBuMlUODi
— Saaksha TV (@SaakshaTv) April 13, 2021
ಅವಲಕ್ಕಿ ಪಾಯಸ#Saakshatv #cookingrecipe https://t.co/imvm5nTZ04
— Saaksha TV (@SaakshaTv) April 12, 2021
ರಾತ್ರಿ ಕಾವಲುಗಾರ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಯಶೋಗಾಥೆ#Nightwatchman #IIM #AssistantProfessor https://t.co/zP904yyo08
— Saaksha TV (@SaakshaTv) April 13, 2021
ಹಲವು ವಿಶೇಷತೆಗಳ ಹತ್ತೂರು ಒಡೆಯನ ಪುತ್ತೂರು ಜಾತ್ರೆ#Saakshatv #Putturmahalingeshwarajatre #putturjatre #ಪುತ್ತೂರು_ಜಾತ್ರೆ https://t.co/pfexJwnQHB
— Saaksha TV (@SaakshaTv) April 16, 2021
#Saakshatv #heavyrain #dakshinaKannada #udupi