ಶಬರಿಮಲೆ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತ ( Sabarimala Temple Reopen )
ಕೇರಳ : ಐದು ದಿನಗಳ ಮಾಸಿಕ ಪೂಜಾ ಕಾರ್ಯಕ್ರಮಕ್ಕಾಗಿ ಪ್ರಸಿದ್ಧ ಶಬರಿಮಲೆ (Sabarimala ) ದೇವಸ್ಥಾನವನ್ನು ಶನಿವಾರ ತೆರೆಯಲಾಗಿದ್ದು, ಭಕ್ತರಿಗೂ ದೇಗುಲ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಕೊರೊನಾ ವೈರಸ್ ಹಿನ್ನೆಲೆ ಆರು ತಿಂಗಳಿಂದ ದೇಗುಲ ಪ್ರವೇಶ ನಿಬರ್ಂಧಿಸಲಾಗಿತ್ತು.
ಶನಿವಾರ ಮಾಸ್ಕ್ ಧರಿಸಿದ್ದ ಹಾಗೂ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ಪ್ರಮಾಣಪತ್ರಗಳನ್ನು ಹೊಂದಿದ್ದ ಕೆಲ ಭಕ್ತರು ಪ್ರವೇಶ ಪಡೆದು ಪೂಜೆ ಸಲ್ಲಿಸಿದರು.
ಭಕ್ತರು ಪೂಜೆ ಸಲ್ಲಿಸಲು ಅಕ್ಟೋಬರ್ 21ರವರೆಗೂ ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂದಿನ ಎರಡೂವರೆ ತಿಂಗಳು ನಿರ್ಣಾಯಕ – ಹರ್ಷ್ ವರ್ಧನ್
ಆನ್ಲೈನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ಭಕ್ತರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ನಿತ್ಯ ಗರಿಷ್ಠ 250 ಮಂದಿ ಭಕ್ತಾದಿಗಳಿಗೆ ಪ್ರವೇಶ ನೀಡಲು ಅವಕಾಶ ನೀಡಲಾಗಿದೆ.
ಸಾಮಾನ್ಯವಾಗಿ ದೇಗುಲದ ಆವರಣದಲ್ಲಿ ಕಾಣಬರುತ್ತಿದ್ದ ನೂಗುನುಗ್ಗಲು ಚಿತ್ರಣ ಈ ಬಾರಿ ಕೋವಿಡ್ ಕಾರಣದಿಂದಾಗಿ ಕಾಣಬರಲಿಲ್ಲ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗೆ ಸರ್ಕಾರದಿಂದ ನೋಟಿಸ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










