ಐಪಿಎಲ್ ಕ್ರಿಕೆಟ್ ಆಟದ ಅಂದವನ್ನು ಹೆಚ್ಚಿಸಿದೆ – ಸಚಿನ್ ತೆಂಡುಲ್ಕರ್
Sachin Tendulkar credits IPL for developing India’s bench strength
ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಟದ ಅಂದವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಬೆಂಚ್ ಸ್ಟ್ರೇಂತ್ ಅನ್ನು ಪ್ರಬಲಗೊಳಿಸಿದೆ. ಇದು ವಿಶ್ವ ಕ್ರಿಕೆಟ್ ನ ಬ್ರಹ್ಮ ಸಚಿನ್ ತೆಂಡುಲ್ಕರ್ ಅಭಿಮತ.
ಐಪಿಎಲ್ ನಲ್ಲಿ ಆಡಿದ ಯುವ ಕ್ರಿಕೆಟಿಗರು ಸಾಲು ಸಾಲಾಗಿ ಟೀಮ್ ಇಂಡಿಯಾಗೆ ಎಂಟ್ರಿಪಡೆಯಲು ಕಾಯುತ್ತಿದ್ದಾರೆ. ಐಪಿಎಲ್ ಸಾಕಷ್ಟು ಯುವ ಕ್ರಿಕೆಟಿಗರಿಗೆ ವರದಾನವಾಗಿದೆ. ಹಾಗೇ ವಿಶ್ವಮಟ್ಟದಲ್ಲಿ ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡುವಲ್ಲಿ ಐಪಿಎಲ್ ಪ್ರಮುಖ ಕಾರಣವಾಗಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ನಾವು ಆಡುತ್ತಿರುವಾಗ ಸಮಯ ಸಂದರ್ಭವೇ ಬೇರೆಯಾಗಿತ್ತು. ನಾನು ವಾಸೀಮ್ ಅಕ್ರಮ್, ಶೇನ್ ವಾರ್ನ್ ಅಥವಾ ಮೆಕ್ ಡೆಮ್ರೋಟ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮುನ್ನ ಆಡಿರಲಿಲ್ಲ. ಅಲ್ಲಿಗೆ ಹೋದ ನಂತರವೇ ನಮಗೆ ಗೊತ್ತಾಗುತ್ತಿತ್ತು. ಆದ್ರೆ ಈಗ ಹಾಗಿಲ್ಲ. ಐಪಿಎಲ್ ನಿಂದಾಗಿ ಯುವ ಕ್ರಿಕೆಟಿಗರಿಗೆ ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಆಡುವ ಅನುಭವಗಳು ಸಿಗುತ್ತವೆ ಎಂದು ಐಪಿಎಲ್ ಕ್ರಿಕೆಟ್ ಟೂರ್ನಿಯ ಮಹತ್ವದ ಬಗ್ಗೆ ಸಚಿನ್ ತೆಂಡುಲ್ಕರ್ ತನ್ನ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.
ನಾನು ಸೂರ್ಯ ಕುಮಾರ್ ಯಾದವ್ ಅವರ ಬ್ಯಾಟಿಂಗ್ ಅನ್ನು ನೋಡ್ತಾ ಇದ್ದೆ. ಸೂರ್ಯನಿಗೆ ಜೋಫ್ರಾ ಆರ್ಚೆರ್ ಮತ್ತು ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡುತ್ತಿದ್ದರು. ಆಗ ವೀಕ್ಷಕ ವಿವರಣೆಕಾರರು ಹೇಳುತ್ತಿದ್ದರು, ಇದು ಸೂರ್ಯ ಕುಮಾರ್‍ಗೆ ಹೊಸದೇನಲ್ಲ. ರಾಜಸ್ತಾನ ರಾಯಲ್ಸ್ ವಿರುದ್ಧ ಆಡುವಾಗ ಇವರಿಬ್ಬರು ಹೇಗೆ ಬೌಲಿಂಗ್ ಮಾಡ್ತಾರೆ ಎಂಬುದು ಗೊತ್ತಿತ್ತು ಎಂದು. ಹಾಗೇ ಐಪಿಎಲ್ ಸೂರ್ಯ ಕುಮಾರ್, ಇಶಾನ್ ಕಿಶಾನ್ ಸೇರಿದಂತೆ ಹಲವಾರು ಕ್ರಿಕೆಟಿಗರ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗಿದೆ. ಇದು ಐಪಿಎಲ್ ನ ವಿಶೇಷ. ಐಪಿಎಲ್ ಕ್ರಿಕೆಟ್ ನ ಅಂದವನ್ನು ಹೆಚ್ಚಿಸಿದೆ ಎಂದು ಸಚಿನ್ ಹೇಳಿದ್ರು.
#SachinTendulkar #IPL #teamindia #bcci #suryakumaryadav #ishankishan #mumbaiindians