ಸಚಿನ್ ತೆಂಡುಲ್ಕರ್ ವೀಕ್ ನೆಸ್ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್
ಸಚಿನ್ ತೆಂಡುಲ್ಕರ್.. 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ಆಟಗಾರ. ಅನೇಕ ದಾಖಲೆಗಳ ಒಡೆಯ.. ಸಚಿನ್ ಅಂದ್ರೆ ಜೀನಿಯಸ್.. ಸಚಿನ್ ಅಂದ್ರೆ ಕ್ರಿಕೆಟ್ ಜಗತ್ತಿನ ಎವರ್ ಗ್ರೀನ್ ಆಟಗಾರ..
ಅಂದ ಹಾಗೇ, ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದರು. ಇನ್ನೊಂದೆಡೆ ಸಚಿನ್ ವಿಕೆಟ್ ಪಡೆಯಲು ಬೌಲರ್ ಗಳು ಶತಪ್ರಯತ್ನ ನಡೆಸುತ್ತಿದ್ದರು. ಆದ್ರೆ ಸಚಿನ್ ಕೆಲವೊಂದು ಸಲ ಸುನಾಮಿಯಂತೆ ಭೊರ್ಗರೆಯುವ ಆಟವನ್ನು ಆಡುತ್ತಿದ್ರೆ, ಮತ್ತೆ ಕೆಲವು ಬಾರಿ ತಂಗಾಳಿಯಂತೆ ರನ್ ಗಳಿಸುತ್ತಿದ್ದರು. ಇನ್ನು ಕೆಲವು ಬಾರಿ ಕ್ರಿಸ್ ಗೆ ವಿಸಿಟ್ ಕೊಟ್ಟು ಹೋಗುತ್ತಿದ್ದರು. ಅದೇನೇ ಇರಲಿ, 1989ರಿಂದ 2013ರವರೆಗೆ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಸಚಿನ್ ಅನ್ನೋ ಹೆಸರು ಮಂತ್ರಘೋಷದಂತೆ ಮೈದಾನದಲ್ಲಿ ಮೊಳಗುವಂತೆ ಮಾಡಿದ್ದರು.
ಇನ್ನು ಸಚಿನ್ ಆಟದಲ್ಲಿ ಪರಿಪೂರ್ಣ ಆಟಗಾರ. ಅವರ ಆಟದ ಶೈಲಿ, ತಾಂತ್ರಿಕತೆಯಲ್ಲಿ ಯಾವುದೇ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ. ಅದು ವೇಗದ ಬೌಲಿಂಗ್ ಇರಲಿ, ರಿವರ್ಸ್ ಸ್ವಿಂಗ್, ಇನ್ ಸ್ವಿಂಗ್, ಆಫ್ ಸ್ಪಿನ್, ಲೆಗ್ ಸ್ಪಿನ್, ದೂಸ್ರಾ ಎಸೆತ, ಕೇರಂ ಎಸೆತ.. ಹೀಗೆ ಬೌಲರ್ ಗಳ ಬತ್ತಳಿಕೆಯ ಎಲ್ಲಾ ಆಸ್ತ್ರಗಳಿಗೂ ಸಚಿನ್ ದಿಟ್ಟ ಉತ್ತರ ನೀಡುತ್ತಿದ್ದರು. ಹೀಗಾಗಿ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನ ಮಾಸ್ಟರ್ ಬ್ಲ್ಯಾಸ್ಟರ್.
ಆದ್ರೆ ಸಚಿನ್ ಇಷ್ಟೆಲ್ಲಾ ರನ್ ಗಳಿಸಿದ್ರೂ, 24 ವರ್ಷ ಆಡಿದ್ರೂ, ಹಲವು ದಾಖಲೆಗಳನ್ನು ಬರೆದ್ರೂ ಅವರ ಬ್ಯಾಟಿಂಗ್ ನಲ್ಲಿ ಒಂದು ಲೋಪವಿತ್ತು. ಹೌದು, ಸಚಿನ್ ಅವರ ವಿಕ್ ನೆಸ್ ಯಾವುದು ಅನ್ನೋದನ್ನು ಮುತ್ತಯ್ಯ ಮುರಳೀಧರನ್ ಬಹಿರಂಗಪಡಿಸಿದ್ದಾರೆ.
ಅಷ್ಟಕ್ಕೂ ಸಚಿನ್ ತೆಂಢುಲ್ಕರ್ ಅವರಿಗೆ ಬೌಲಿಂಗ್ ಮಾಡಲು ಯಾವುದೇ ಹೆದರಿಕೆ ಇಲ್ಲ. ಯಾಕಂದ್ರೆ ಸಚಿನ್ ನೋಯಿಸುವುದಿಲ್ಲ. ಹಾಗಂತ ಸಚಿನ್ ಸೆಹ್ವಾಗ್ ರೀತಿ ನೋವು ನೀಡದೇ
ಇದ್ರೂ ಕೂಡ ಬೇರೆ ರೀತಿಯಲ್ಲಿ ಸತಾಯಿಸುತ್ತಾರೆ. ಸಚಿನ್ ತನ್ನ ವಿಕೆಟ್ ಉಳಿಸಿಕೊಳ್ಳುತ್ತಿದ್ದರು. ತಾಂತ್ರಿಕತೆಯಲ್ಲಿ ಪರಿಪಕ್ವ ಗೊಂಡಿರುವ ಸಚಿನ್ ತೆಂಡುಲ್ಕರ್ ಪ್ರತಿ ಎಸೆತಗಳನ್ನು ಬಲು ಬೇಗನೇ ಅಥೈಸಿಕೊಳ್ಳುತ್ತಿದ್ದರು ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಆದ್ರೆ ಸಚಿನ್ ತೆಂಡುಲ್ಕರ್ ಆಫ್ ಸ್ಪಿನ್ನರ್ ಗಳಿಗೆ ಸ್ವಲ್ಪ ಎಡವುತ್ತಿದ್ದರು. ಲೆಗ್ ಸ್ಪಿನ್ ಎಸೆತಗಳಿಗೆ ಸುಲಭವಾಗಿ ಹೊಡೆಯುತ್ತಿದ್ದರು. ಆದ್ರೆ ಆಫ್ ಸ್ಪಿನ್ ಎಸೆತಗಳಿಗೆ ತುಸು ಕಷ್ಟಪಡುತ್ತಿದ್ದರು. ಯಾಕಂದ್ರೆ ಸಚಿನ್ ವಿಕೆಟ್ ಅನ್ನು ನಾನೇ ಸಾಕಷ್ಟು ಬಾರಿ ಪಡೆದಿದ್ದೇನೆ. ಹಾಗೇ ಸಾಕಷ್ಟು ಆಫ್ ಸ್ಪಿನ್ ಬೌಲರ್ ಗಳು ವಿಕೆಟ್ ಉರುಳಿಸಿದ್ದಾರೆ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
ಮುತ್ತಯ್ಯ ಮುರಳೀಧರನ್ ಅವರು ಸಚಿನ್ ಅವರನ್ನು 13 ಬಾರಿ ಔಟ್ ಮಾಡಿದ್ದಾರೆ. ಆದ್ರೆ ಅತೀ ಹೆಚ್ಚು ಬಾರಿ ಸಚಿನ್ ವಿಕೆಟ್ ಒಪ್ಪಿಸಿದ್ದು ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಅವರಿಗೆ. ಬ್ರೆಟ್ ಲೀ 14 ಬಾರಿ ಸಚಿನ್ ಅವರನ್ನು ಔಟ್ ಮಾಡಿದ್ದಾರೆ.
ಅದ್ಯಾಕೋ ಗೊತ್ತಿಲ್ಲ. ಸಚಿನ್ ಜೊತೆ ನಾನು ಇದರ ಬಗ್ಗೆ ಮಾತನಾಡಿಲ್ಲ. ಆದ್ರೆ ಸಚಿನ್ ಅವರ ಈ ವೀಕ್ನೆಸ್ ನಿಂದ ನನಗೆ ಲಾಭವಾಗಿದೆ. ಆದ್ರೂ ಸಚಿನ್ ವಿಕೆಟ್ ಪಡೆಯುವುದು ತುಂಬಾ ಕಷ್ಟ ಎಂದು ಮುರಳೀಧರನ್ ಹೇಳಿದ್ದಾರೆ.
ಶ್ರೀಲಂಕಾದ ಸ್ಮೈಲಿಂಗ್ ಕಿಲ್ಲರ್ ಖ್ಯಾತಿಯ ಮುತ್ತಯ್ಯ ಮುರಳೀಧರನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಹಾಗೇ ಏಕದಿನ ಕ್ರಿಕೆಟ್ ನಲ್ಲಿ 534 ಹಾಗೂ ಟಿ-ಟ್ವೆಂಟಿಯಲ್ಲಿ 13 ವಿಕೆಟ್ ಗಳನ್ನು ಕಬಳಿಸಿದ್ದಾರೆ.








