ಯತ್ನಾಳ್ ಹೇಳಿಕೆ ನೀಡೋ ಸ್ಥಾನದಲ್ಲಿಲ್ಲ : ಸದಾನಂದಗೌಡ
ಬೆಂಗಳೂರು : ಯತ್ನಾಳ್ ಪಕ್ಷದ ರಾಷ್ಟ್ರೀಯ ನಾಯಕನಲ್ಲ. ಹೇಳಿಕೆ ನೀಡುವ ಸ್ಥಾನಮಾನದಲ್ಲೂ ಅವರು ಇಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲ. ಎಲ್ಲವೂ ಗೂಡಾರ್ಥವಿದೆ, ಇದೆಲ್ಲದಕ್ಕೂ ಮಕರ ಸಂಕ್ರಮಣದಲ್ಲಿ ಐತಿಹಾಸಿಕವಾಗಿ ಬದಲಾವಣೆಗಳು ಆಗಲಿವೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸದಾನಂದ ಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ಪಕ್ಷದ ರಾಷ್ಟ್ರೀಯ ನಾಯಕನಲ್ಲ. ರಾಜ್ಯದ ಅಧ್ಯಕ್ಷ ಅಥವಾ ಒನ್ನಾವುದೋ ಸ್ಥಾನದಲ್ಲಿಯೂ ಇಲ್ಲ. ಹೇಳಿಕೆ ನೀಡುವ ಸ್ಥಾನಮಾನದಲ್ಲಿ ಸಹ ಅವರಿಲ್ಲ. ಕೇವಲ ಒಬ್ಬ ಶಾಸಕ ಮಾತ್ರ. ಆದರೂ ಮಾಧ್ಯಮಗಳ ಮುಂದೆ ಏನೇನೋ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ.
ಯಾವುದನ್ನ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದರೆ ಅದಕ್ಕೆ ನಿಜವಾದ ಅರ್ಥ, ಗೌರವ ಬರುತ್ತದೆ. ಏನಾದ್ರೂ ಹೇಳ್ಬೇಕು ಅಂತಿದ್ದರೇ ರಾಷ್ರೀಯ ನಾಯಕರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕು.
ಹೀಗಿ ಬೀದಿಯಲ್ಲಿ ಮಾತನಾಡುವುದರಿಂದ ಅವರ ಭವಿಷ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಲ್ಲ. ಕೆಲವನ್ನು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನು ಅವರ ಇತ್ತೀಚಿನ ಬೆಳವಣಿಗೆ ನೋಡಿದರೆ ಅವರ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಯತ್ನಾಳ್ ವಿರುದ್ಧ ಸದಾನಂದ ಗೌಡರು ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









