Sai Pallavi : ಕಾಣೆಯಾದ ಸಾಯಿ ಪಲ್ಲವಿ; ವೆಬ್ ಸೀರಿಸ್ ಮೂಲಕ ಕಂಬ್ಯಾಕ್…??
ನಟಿ ಸಾಯಿ ಪಲ್ಲವಿ ಸಿನಿಮಾ ಆಯ್ಕೆಯಲ್ಲಿ ತುಂಬಾ ಚೂಸಿ, ಸಿಕ್ಕಿದ್ದಕ್ಕೆಲ್ಲ ಸಹಿ ಮಾಡದೇ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಲವ್ ಸ್ಟೋರಿ, ವಿರಾಟಪರ್ವಂ ಮತ್ತು ಗಾರ್ಗಿಯಂತಹ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದ್ದ ಸಾಯಿ ಪಲ್ಲವಿ ತುಂಬಾ ದಿನಗಳಿಂದ ಒಂದೇ ಒಂದು ಚಿತ್ರಕ್ಕೂ ಸಹಿ ಹಾಕಿಲ್ಲ. ಅಭಿಮಾನಿಗಳು ಸಹ ಮತ್ತೆ ಯಾವಾಗ ತೆರೆ ಬರುತ್ತಾರೆ ಎನ್ನವ ಅಪ್ಡೇಟ್ ಗಾಗಿ ಕಾದು ಕುಳಿತಿದ್ದಾರೆ.
ಇತ್ತೀಚೆಗಷ್ಟೇ ಸಾಯಿ ಪಲ್ಲವಿ ಸಿನಿಮಾ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೇ ಇದರ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಹೊರ ಬರಲಿಲ್ಲ. ಇದೀಗ ಸಾಯಿ ಪಲ್ಲವಿ ಬಹುದಿನಗಳ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ವೆಬ್ ಸೀರಿಸ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಫೀಲ್ ಗುಡ್ ಚಿತ್ರಗಳ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಲಿರುವ ಈ ವೆಬ್ ಸೀರಿಸ್ ನಲ್ಲಿ ಸಾಯಿ ಪಲ್ಲವಿ ನಟಿಸಲು ಒಪ್ಪಿಕೊಂಡಿದ್ದಾರೆ.
ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆಯಾಗದ ಕಾರಣ ಸಾಯಿ ಪಲ್ಲವಿ ನಿಜಕ್ಕೂ ಈ ಮಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
Sai Pallavi : Missing Sai Pallavi; Comeback through web series…??








