ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಹಲ್ಲಗೆ ಮುಂದಾದ ಡಿಜೆ Saaksha Tv
ಬೆಂಗಳೂರು: ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಯುವತಿ ಹಾಗೂ ಆತನ ಸಹೋದರ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಬೆಂಗಳೂರಿನ ಕೋರಮಂಗಲ 80 ಫೀಟ್ ರಸ್ತೆಯಲ್ಲಿರು ಬದ್ಮಾಷ್ ಪಬ್ ನಲ್ಲಿ ನಡೆದಿದೆ.
ಬದ್ಮಾಷ್ ಪಬ್ ಡಿಜೆ ಸಿದ್ಧಾರ್ಥ್ @ ಆಪೋಸಿಟ್ ಹಲ್ಲೆಗೆ ಯತ್ನಿಸಿದ ಆರೋಪಿ. ಫೆಬ್ರವರಿ ೫ ರಂದು ಸುಮಿತಾ ಎಂಬ ಯುವತಿ ಹುಟ್ಟು ಹಬ್ಬವಿದ್ದು, ಹೀಗಾಗಿ ಬದ್ಮಾಷ್ ಪಬ್ ಗೆ ಸುಮಿತಾ, ಸಹೋದರ ನಂದಕಿಶೋರ್ ಹಾಗೂ ಸ್ನೇಹಿತರ 15 ಜನರ ತಂಡ ಪಬ್ ಗೆ ಹೋಗಿದ್ದಾರೆ.
ರಾತ್ರಿ 9 ಕ್ಕೆ ಪಬ್ ಗೆ ತೆರಳಿದ ಇವರು 9:30 ರಿಂದ ರಾತ್ರಿ ೧೨.೩೦ ಗಂಟೆವರೆಗೂ ಕನ್ನಡ ಹಾಡು ಪ್ಲೇ ಮಾಡಿ ಎಂದು ಡಿಜೆ ಗೆ ಮನವಿ ಮಾಡಿದ್ದಾರೆ. ಅಲ್ಲದೇ ಸ್ವತಃ ಯುವತಿ ಸುಮಿತಾ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ ಎಂದು ನಾಲ್ಕೈದು ಬಾರಿ ಕೇಳಿದ್ದರು. ನಂತರ ಸುಮಿತಾ ಮತ್ತೊಬ್ಬ ಸಹೋದರ ಡಾ.ದೀಪಕ್ ಕೂಡ ಕನ್ನಡ ಹಾಡು ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆದರೆ ಬದ್ಮಾಶ್ ಪಬ್ ನ ಡಿಜೆ ಕನ್ನಡ ಸಾಂಗ್ ಹಾಕದೇ ತೆಲುಗು ತಮಿಳು ಹಿಂದಿ ಹಾಡುಗಳನ್ನ ಪ್ಲೇ ಮಾಡಿದ್ದರು. ಇದರಿಂದ ಬೇಸರಗೊಂಡ ಸುಮಿತಾ ಸ್ನೇಹಿತರು ಕನ್ನಡ ಹಾಡು ಹಾಕಿ ಅಂತ ಕೇಳಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಡಿಜೆ ಸುಮಿತಾ ಸ್ನೇಹಿತರು ಮತ್ತು ಸಹೋದರರಿದ್ದ ಟೇಬಲ್ ಬಳಿ ಬಂದು ಕನ್ನಡ ಸಾಂಗ್ ಹಾಕಲಿಕ್ಕೆ ಆಗಲ್ಲ,ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಅಂತ ಅವಾಜ್ ಹಾಕಿದ್ದಾನೆ.
ಈ ವೇಳೆ ಬದ್ಮಾಷ್ ಪಬ್ ನಲ್ಲಿ ಸುಮಿತಾ ಸ್ನೇಹಿತರು ಡಿಜೆ ಜೊತೆಗೆ ವಾಗ್ವಾದಕ್ಕೆ ಇಳದಿದ್ದಿದ್ದಾರೆ. ಅಲ್ಲದೇ ಸುಮಿತಾ ಸಹೋದರ ನಂದ ಕಿಶೋರ್ ಕಾಲರ್ ಹಿಡಿದು ಡಿಜೆ ಹಲ್ಲೆಗೆ ಮುಂದಾಗಿದ್ದಾನೆ. ಘಟನೆಯು ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.










