ಮುಂಬಯಿ: ಸರಿಯಾದ ಸಮಯಕ್ಕೆ ನಟ ಸೈಫ್ ಅಲಿ ಖಾನ್ (Saif Ali Khan) ರನ್ನು ಆಸ್ಪತ್ರೆಗೆ ಸಾಗಿಸಿ, ಜೀವ ಉಳಿಸಿದ್ದ ಆಟೋ ಚಾಲಕನಿಗೆ ಧನ್ಯವಾದ ಅರ್ಪಿಸಲಾಗಿದೆ.
ಈಗ ಆಟೋ ಚಾಲಕ ಮತ್ತು ಸೈಫ್ ಅಲಿಖಾನ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದ್ಲಿ ವೈರಲ್ ಆಗುತ್ತಿವೆ. ಸೈಫ್ ಅಲಿಖಾನ್ ಮಂಗಳವಾರ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾಜ್ ಆಗುವ ಮುನ್ನ ಆಟೋ ಚಾಲಕ ಭಜನ್ ಸಿಂಗ್‌ರನ್ನು ಸೈಫ್ ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ.
ಗಾಯಗೊಂಡಿದ್ದ ತಮ್ಮನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನನ್ನು (Auto Driver) ಕರೆಸಿ ಧನ್ಯವಾದ ತಿಳಿಸಿದ್ದಲ್ಲದೇ, ಮುಂದೆ ನಿಮಗೆ ಏನೇ ಸಹಾಯ ಬೇಕೆಂದರು ತಮ್ಮನ್ನು ಸಂಪರ್ಕಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಜ.16ರಂದು ಸೈಫ್ ಅಲಿ ಖಾನ್ ಮೇಲೆ ಖದೀಮನೊಬ್ಬ ಚಾಕುವಿನಿಂದ ದಾಳಿ ಮಾಡಿದ್ದ. ಗಾಯಗೊಂಡಿದ್ದ ನಟನನ್ನು ಆಟೋ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ, ಆಟೋ ಚಾಲಕ ಯಾವುದೇ ಶುಲ್ಕ ಪಡೆಯದೇ ಹಿಂದಿರುಗಿದ್ದರು ಎನ್ನಲಾಗಿದೆ.








