ಸಲ್ಮಾನ್ ಖಾನ್ ಕೊಂದು ಹಾಕಿದ್ದ ಕೃಷ್ಣಮೃಗದ ಸ್ಮಾರಕ ನಿರ್ಮಾಣ..!!
ಬಾಲಿವುಡ್ ನ ಬ್ಯಾಡ್ ಬಾಯ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ರಿಯಲ್ ಲೈಫ್ ನಲ್ಲೂ ಕೆಲ ಬ್ಯಾಡ್ ಬಾಯ್ ಕೆಲಸಗಳನ್ನೇ ಅಂದ್ರೆ ಕುಕೃತ್ಯಗಳನ್ನ ಮಾಡಿ ಜೆಟ್ಟ ಹೆಸರು ಪಡೆದು ಜೈಲಿಗೂ ಸೇರಿದ್ದರು.. ಆದ್ರೆ ಅವರ ಹಣ ಬಲ , ಜನ ಬಲ ಅವರನ್ನ ಹೆಚ್ಚು ಸಮಯ ಜೈಲಿನಲ್ಲಿ ಕೊಳೆಯಲು ಬಿಡಲಿಲ್ಲ..
ಕುಡಿದು ರಸ್ತೆಬದಿ ಮಲಗಿದ್ದವರನ್ನ ಸಲ್ಮಾನ್ ಖಾನ್ ಕೊಂದಿದ್ದನ್ನ ಜನರು ಎಂದಿಗೂ ಮರೆಯೋದಿಲ್ಲ.. ವಿವೇಕ್ ಓಬರಾಯಿಗೆ ಕೊಲೆ ಬೆದರಿಕೆ ಹಾಕಿದ್ದು ಅವರ ವರ್ಚಸ್ಸನ್ನ ಕುಗ್ಗಿಸಿತ್ತು.. ಮೋಜು ಮಸ್ತಿಗಾಗಿ ಅಳಿವಿನಂಚಿನಲ್ಲಿರುವ ಕೃಷ್ಣಮೃಗ ಬೇಟಿಯಾಡಿದ್ದು , ಅವರು ಎಷ್ಟೇ ದೊಡ್ಡ ವ್ಯಕ್ತಿಯಾದ್ರೂ ಅವರ ಸಣ್ಣತನವನ್ನ ವಿಶ್ವಕ್ಕೆ ತೋರಿಸಿತ್ತು.. ಹೀಗೆ ಸಲ್ಲು ಕುಕೃತ್ಯಗಳು ಒಂದಾ ಎರೆಡಾ..
1998 ರಲ್ಲಿ ಸಲ್ಮಾನ್ ಬೇಟೆಯಾಡಿದ್ದ ಕೃಷ್ಣಮೃಗದ ನೆನಪಲ್ಲಿ ಬಿಶ್ನೋನ್ ಸಮುದಾಯದವರು ಅದರ ಸ್ಮಾರಕವನ್ನ ನಿರ್ಮಿಸಲು ಮುಂದಾಗಿದ್ದಾರೆ.. ಈ ಮೂಲಕ ಸಲ್ಮಾನ್ ಖಾನ್ ಗೆ ಪರೋಕ್ಷವಾಗಿ ಏಟು ಬೀಸಿದ್ದಾರೆ.. 2018ರಲ್ಲಿ ಸಲ್ಮಾನ್ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ವಿಧಿಸಲಾಗಿತ್ತು.. ಹಾಗೂ 2.50 ಲಕ್ಷ ದಂಡ ವಿಧಿಸಲಾಗಿತ್ತು.. ಆದ್ರೆ ಇದರ ವಿರುದ್ಧ ಸಲ್ಮಾನ್ ಜೋಧ್ ಸೆಷನ್ಸ್
ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.. ಈ ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ.. ಆದ್ರೂ ಸಿನಿಮಾ ಮಾಡ್ತಾ ,,, ಬಿಗ್ ಬಾಸ್ ನಡೆಸಿಕೊಡ್ತಾ ಆರಾಮಾಗಿ ಬಿಂದಾಸ್ ಆಗಿ ಹೊರಗಡೆ ಓಡಾಡ್ತಿದ್ದಾರೆ ಸಲ್ಮಾನ್.. 1998 ರಲ್ಲಿ ಕೃಷ್ಣಮೃಗ ಭೇಟೆಯಾಡಿದ ರಾಜಸ್ಥಾನದ ಜೋದ್ಪುರದ ಸ್ಥಳದಲ್ಲಿಯೇ ಬಿಶ್ಣೋಯ್ ಸಮುದಾಯವು ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡಲಿದ್ದು, ಜೊತೆಗೆ ಗಾಯಗೊಂಡ ಪ್ರಾಣಿಗಳ ಆರೈಕೆ, ಸಂರಕ್ಷಣೆಗೆ ಕೇಂದ್ರವನ್ನೂ ಸ್ಥಾಪಿಸಲಿದೆ.
ಬಿಶ್ಣೋಯ್ ಸಮುದಾಯದವರು ಕೃಷ್ಣಮೃಗಗಳನ್ನು ತಮ್ಮ ದೇವರೆಂದು, ತಮ್ಮ ಸಮುದಾಯದ ಮೊದಲ ಗುರುವಾದ ಗುರು ಜಂಬೇಶ್ವರ್ ಅಥವಾ ಜಂಬಾಜಿಯ ಅವತಾರ ಎಂದು ನಂಬುತ್ತಾರೆ. ಹಾಗಾಗಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಭೇಟೆ ಆಡಿದಾಗ ಬಿಶ್ಣೋಯ್ ಸಮುದಾಯವು ತೀವ್ರವಾಗಿ ಖಂಡಿಸಿದ್ದು ಈ ವರೆಗೂ ಹೋರಾಡುತ್ತಲೇ ಇದ್ದಾರೆ.








