ಮುಂಬೈ, ಜೂನ್ 6 : ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ನಿಸರ್ಗ ಚಂಡಮಾರುತ ಮುಂಬೈಗೆ ಅಪ್ಪಳಿಸಿದ್ದರೂ ನಿರೀಕ್ಷೆಗಿಂತ ಚಂಡಮಾರುತದ ವೇಗ ದುರ್ಬಲವಾದ ಪರಿಣಾಮ ಅಷ್ಟೇನೂ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿಲ್ಲ. ಆದರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಯೂಲಿಯಾ ವಂಟೂರ್ ಚಂಡಮಾರುತದ ಹೊಡೆತಕ್ಕೆ ಸಿಕ್ಕ ಫಾರ್ಮ್ ಹೌಸ್ ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CBDtTsEFUAZ/?utm_source=ig_web_copy_link
ಲಾಕ್ ಡೌನ್ ಸಮಯದಲ್ಲಿ ಸಲ್ಮಾನ್ ಖಾನ್, ಯೂಲಿಯಾ ಮತ್ತು ಕೆಲವು ಸ್ನೇಹಿತರು ಸಲ್ಮಾನ್ ಖಾನ್ ನ ಪನ್ವೆಲ್ ನ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದು, ಯೂಲಿಯಾ ಚಂಡಮಾರುತದ ಸಮಯದಲ್ಲಿ ಜೋರಾಗಿ ಬೀಸುತ್ತಿರುವ ಗಾಳಿಗೆ ಮರಗಳು ಬೀಳುತ್ತಿರುವುದು, ಜೋರಾಗಿ ಮಳೆ ಸುರಿಯುತ್ತಿರುವುದನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಫಾರ್ಮ್ ಹೌಸ್ ಸುತ್ತಮುತ್ತ ಉಂಟಾದ ಹಾನಿಯನ್ನು ಯೂಲಿಯಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ದಟ್ಟವಾದ ಮೋಡ, ಸೂರ್ಯಾಸ್ತ ನಿಂತು ಹೋದರೂ ಜೀವನ ನಡೆಯುತ್ತದೆ. ಮರುದಿನ ಸೂರ್ಯೋದಯವಾಗುತ್ತೆ ಎಂದು ಹೇಳಿದ್ದು, ಇದನ್ನೆಲ್ಲಾ ಸರಿ ಮಾಡಲು ಮತ್ತೊಮ್ಮೆ ಸೂರ್ಯ ಉದಯಿಸುತ್ತಾನೆ ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.
ಸಲ್ಮಾನ್ ಖಾನ್, ಯೂಲಿಯಾ, ಜಾಕ್ವೆಲ್ ಫರ್ನಾಂಡಿಸ್ ಸೇರಿದಂತೆ ಹಲವರು ಲಾಕ್ ಡೌನ್ ಸಮಯದಲ್ಲಿ ಮುಂಬೈನಿಂದ ದೂರವಿದ್ದು ಪನ್ವೆಲ್ ನ ತೋಟದ ಮನೆಯಲ್ಲಿದ್ದಾರೆ. ಅಷ್ಟೇ ಅಲ್ಲ ಈ ಸಮಯದಲ್ಲಿ ಸಲ್ಮಾನ್ ಖಾನ್ ಮ್ಯೂಸಿಕ್ ವಿಡಿಯೋವೊಂದನ್ನು ಮಾಡಿ ರಿಲೀಸ್ ಮಾಡಿದ್ದಾರೆ.








