ಅಮೆರಿಕಾಯನ್ನು ನಡುಗಿಸುತ್ತಿದೆ ಈರುಳ್ಳಿ Salmonella saaksha tv
ವಿಶ್ವದ ದೊಡ್ಡಣ್ಣ ಅಂತಾ ಎದೆಯುಬ್ಬಿಸಿ ಓಡಾಡುವ ಅಮೆರಿಕಾವನ್ನು ಈರುಳ್ಳಿ ನಡುಗಿಸುತ್ತಿದೆ.
ಅಮೆರಿಕನ್ನರಿಗೆ ಈರುಳ್ಳಿ ವಿಲನ್ ಆಗಿದ್ದು, ಮನೆಯಲ್ಲಿರುವ ಈರುಳ್ಳಿಯನ್ನು ರಸ್ತೆಗೆ ಎಸೆಯುತ್ತಿದ್ದಾರೆ.
ಹೌದು..! ಹೆಮ್ಮಾರಿ ಕೊರೊನಾ ವೈರಸ್ ಅಮೆರಿಕಾವನ್ನು ಬಿಟ್ಟುಬಿಡದೇ ಕಾಡಿತ್ತು.
ಈ ಮಹಾಮಾರಿಯಿಂದ ಹೇಗೋ ತಪ್ಪಿಸಿಕೊಂಡು ಸಹಜಸ್ಥತಿಗೆ ಅಮೆರಿಕಾ ಮರಳುತ್ತಿದೆ.
ಆದರೆ ಇದರ ಮಧ್ಯೆ ಅಮೆರಿಕಾದಲ್ಲಿ ಮತ್ತೊಂದು ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ.
ಈ ಬ್ಯಾಕ್ಟೀರಿಯಾ ಸೋಂಕು ಹರಡಿರುವ ಈರುಳ್ಳಿಯನ್ನ ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದಾರೆ.
ಹೀಗಾಗಿ ಇಲ್ಲಿನ ಸರ್ಕಾರ ಮನೆಯಲ್ಲಿರುವ ಈರುಳ್ಳಿಗಳನ್ನ ಬಳಸದಂತೆ ಎಚ್ಚರಿಕೆ ನೀಡಿದೆ.
ಮೆಕ್ಸಿಕೋದ ಚಿವಾವಾ ಎಂಬಲ್ಲಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ.