ಉಪ್ಪಿನಂಗಡಿ : ವಿದ್ಯುತ್ ಶಾಕ್ ಹೊಡೆದು ಲೈನ್ ಮನ್ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಬಳಿಯ ಹುಣಸೆಕಟ್ಟೆಯಲ್ಲಿ ನಡೆದಿದೆ. ಬಿಜಾಪುರ ಮೂಲದ 26 ವರ್ಷದ ಬಸವರಾಜು ಮೃತ ದುರ್ದೈವಿಯಾಗಿದ್ದಾರೆ.
ನಿನ್ನೆ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ವಿದ್ಯುತ್ ಕಂಬವೊಂದರಲ್ಲಿ ಸಮಸ್ಯೆ ಉಂಟಾಗಿದೆ. ಈ ಕುರಿತು ಬಸವರಾಜು ಅವರಿಗೆ ಸ್ಥಳೀಯ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಬಸವರಾಜು ಇಂದು ಮುಂಜಾನೆ ವಿದ್ಯುತ್ ಕಂಬವೇರಿ ಪರಿಶೀಲನೆ ನಡೆಸುವಾಗ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ದಾರಿ ಮಧ್ಯೆ ಬಸವರಾಜು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.