Sam Curran : T20 ವಿಶ್ವಕಪ್ ನಲ್ಲಿ ಸ್ಯಾಮ್ ಕರಣ್ ಹೊಸ ದಾಖಲೆ..!!
ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ನಾಗಿ ಮೆರೆದಿದೆ.
ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರವಹಿಸಿದರು ಅನ್ನೋದ್ರಲ್ಲಿ ಎರಡೂ ಮಾತಿಲ್ಲ. ಆದರೆ ಪಾಕ್ ತಂಡವನ್ನು 137 ರನ್ಗಗಳಿಗೆ ಕಟ್ಟಿಹಾಕುವುದರ ಹಿಂದೆ ವೇಗಿ ಸ್ಯಾಮ್ ಕರನ್ ಅವರ ಪಾತ್ರ ಅಷ್ಟೆ ಪ್ರಮುಖವಾಗಿತ್ತು. ಕರನ್ ಓಪನರ್ ಮೊಹ್ಮದ್ ರಿಜ್ವಾನ್, ಶಾನ್ ಮಸೂದ್, ಮೊಹ್ಮದ್ ನವಾಜ್ ರಂತಹ ಸ್ಟಾರ್ ಬ್ಯಾಟರ್ಗಲನ್ನು ಪೆವಿಲಿಯನ್ ಗೆ ಅಟ್ಟಿದರು. ಕರನ್ 4 ಓವರ್ಗಳಿಂದ ಕೇವಲ 12 ರನ್ ಕೊಟ್ಟು 3 ವಿಕೆಟ್ ಪಡೆದರು.
ಇದರೊಂದಿಗೆ ದಾಖಲೆಯನ್ನು ಬರೆದರು. ಟಿ20 ವಿಶ್ವಕಪ್ ಫೈನಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೆ ಬೌಲರ್ ಎನಿಸಿದರು.
ಶ್ರೀಲಂಕಾದ ಮಾಜಿ ಸ್ಪಿನ್ನರ್ ಅಜಂತಾ ಮೆಂಡಿಸ್ 2012ರ ಟಿ20 ವಿಶ್ವಕಪ್ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್ಗೆ 4 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ವೆಸ್ಟ್ಇಂಡೀಸ್ ತಂಡದ ಸುನಿಲ್ ನರೈನ್ 2012ರಲ್ಲಿ ಶ್ರೀಲಂಕಾ ವಿರುದ್ಧ 9 ರನ್ ನೀಡಿ 3 ವಿಕೆಟ್ ಪಡೆದಿದ್ದರು.
ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 16 ರನ್ಗೆ 3 ವಿಕೆಟ್ ಪಡೆದು ನಾಲ್ಕನೆ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವೇಗಿ ಜೋಶ್ ಹೆಜ್ಲ್ ವುಡ್ 2021ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 16ಕ್ಕೆ 3 ವಿಕೆಟ್ ಪಡೆದು ಐದನೆ ಸ್ಥಾನದಲ್ಲಿದ್ದಾರೆ.