200 ಕೋಟಿ ಜೀವನಾಂಶ ಬೇಡವೆಂದ್ರಂತೆ ಸ್ಯಾಮ್ samantha saaksha tv
ಹೈದರಾಬಾದ್ : ಟಾಲಿವುಡ್ ನ ಕ್ಯೂಟ್ ಕಪಲ್ ಆಗಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ತಮ್ಮ ನಾಲ್ಕು ವರ್ಷ ದಾಂಪತ್ಯಕ್ಕೆ ಶನಿವಾರ ಅಂತಿಮ ವಿರಾಮ ಇಟ್ಟಿದ್ದಾರೆ.
ನಿನ್ನೆ ಸೋಶಿಯಲ್ ಮೀಡಿಯಾ ಮೂಲಕ ತಾವಿಬ್ಬರು ವಿಚ್ಛೇದನ ಪಡೆದಿರುವುದಾಗಿ ಘೋಷಿಸಿದ್ದಾರೆ.
ಈ ಮಧ್ಯೆ ಸಮಂತಾ 200 ಕೋಟಿ ರುಪಾಯಿಯ ಜೀವನಾಂಶವನ್ನು ನಿರಾಕರಿಸಿದ್ದಾರೆ ಎಂಬ ಇದೀಗ ಸದ್ದು ಮಾಡುತ್ತಿದೆ.
ಸಮಂತಾಗೆ ಅಕ್ಕಿನೇನಿ ಕುಟುಂಬ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಮುಂದಾಗಿತ್ತು.
ಆದರೆ ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದಾರಂತೆ.
ಸದ್ಯ ಈ ಸುದ್ದಿ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.









