Samantha : ಡಿವೋರ್ಸ್ ಬಳಿಕ ಸಮಂತಾ ಮೊದಲ ಸಿನಿಮಾ ರಿಲೀಸ್…!!!
ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ನಟ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ ನಂತರ ಸಿನಿಮಾಗಳು , ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ.. ಡಿವೋರ್ಸ್ ಪಡೆದು ತಿಂಗಳುಗಳೇ ಕಳೆದ್ರೂ ಈಗಲೂ ಚರ್ಚೆಯಲ್ಲಿದ್ದಾರೆ.. ಟ್ರೋಲ್ ಗಳಿಗೂ ಗುರಿಯಾಗ್ತಿದ್ದಾರೆ. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಫ್ರೆಂಡ್ಸ್ ಜೊತೆಗೆ ಜಾಲಿ ಟ್ರಿಪ್ ಗಳನ್ನ ಎಂಜಾಯ್ ಮಾಡ್ತಿದ್ದಾರೆ.. ಅದ್ರಲ್ಲೂ ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಕ್ಸಸ್ ಕಂಡಿದ್ದಾರೆ..
ಇದೀಗ ಡಿವೋರ್ಸ್ ಬಳಿಕ ಸಮಂತಾ ನಟನೆಯ ಮೊದಲ ಸಿನಿಮಾ ಬಿಡುಗಡೆಯಾಗ್ತಿದೆ.. ಸಮಂತಾ ಅಭಿನಯದ ಪೌರಾಣಿಕ ಕಥಾಧಾರಿತ ಸಿನಿಮಾ ಶಾಕುಂತಲಂ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ರಿಲೀಸ್ ಆಗಲಿದೆ.
ಈ ಸಿನಿಮಾವನ್ನ ಗುಣಶೇಖರ್ ನಿರ್ದೇಶಿಸಿದ್ದಾರೆ. ಈ ಬಗ್ಗೆ ಭಾನುವಾರದಂದು ತಮ್ಮ ಇನ್ ಸ್ಟಾಗ್ರಾಮ್ ಅಭಿಮಾನಿಗಳ ಪ್ರಶ್ನೆಗೆ ಉಇತ್ತರಿಸುತ್ತಿದ್ದ ಮಾಡಿದ ಚಿತ್ರದ ನಿರ್ಮಾಪಕಿ ನೀಲಿಮಾ ಗುಣಾ ಅವರು ಸಿನಿಮಾದ ಸರಣಿ ಅಪ್ ಡೇಟ್ ಬರುತ್ತಿವೆ ಎಂದು ಬಹಿರಂಗಪಡಿಸಿದ್ದರು. ಅಲ್ಲದೇ ಶಕುಂತಲಂ ಚಿತ್ರದ ಸಮಂತಾ ಅವರ ಫಸ್ಟ್ ಲುಕ್ ಪೋಸ್ಟರ್ ಕೂಡ ಶೀಘ್ರವೇ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು. ಸಿನಿಮಾದಲ್ಲಿ ದೇವ್ ಮೋಹನ್ , ಅಲ್ಲು ಅರ್ಜುನ್ ಅವರ ಆರು ವರ್ಷದ ಮಗಳು ಅಲ್ಲು ಅರ್ಹಾ ಕೂಡ ನಟಿಸಿದ್ದಾರೆ..
ಇದರ ಜೊತೆಗೆ ಸಮಂತಾ ಅವರು ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆಗೆ ಕಾದು ವಾಕುಲಾ ರೆಂಡು ಕಾದಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ಜೊತೆಗೆ ಫಿಲಿಪ್ ಜಾನ್ ನಿರ್ದೇಶನದ ಅರೇಂಜ್ ಮೆಂಟ್ಸ್ ಆಫ್ ಲವ್ ಸಿನಿಮಾದಲ್ಲೂ ತನ್ನ ಸಮಂತಾ ನಟಿಸಿದ್ದಾರೆ. ಇದರ ಹೊರತಾಗಿ ತಾಪ್ಸಿ ಪೊನ್ನು ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಮಂತಾ ನಟಿಸಲಿದ್ದಾರೆ.. ಈ ಸಿನಿಮಾದ ಸೌತ್ ವರ್ಷನ್ ನಲ್ಲಿ ಸಮಂತಾ , ಬಾಲಿವುಡ್ ವರ್ಷನ್ ನಲ್ಲಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ.
samantha – new film to be released after divorce – saakshatv
ಇದನ್ನೂ ಓದಿ : Samatha : ಸಮಂತಾ ಶರ್ಟ್ ಮೇಲೆ ಬರೀ… ಕೆಟ್ಟ ಪದಗಳೇ… ಗರಂ ಆದ ನೆಟ್ಟಿಗರು…!!!









