ಹೂ ಅಂಟಾವಾ ಮೇಕಿಂಗ್ ವಿಡಿಯೋ ಹಂಚಿಕೊಂಡ ಗಣೇಶ್ ಆಚಾರ್ಯ
ಸಮಂತಾ ಹೆಜ್ಜೆ ಹಾಕಿರುವ ಪುಷ್ಪ ಚಿತ್ರದ ಹೂ ಅಂಟಾವಾ ಹು ಹೂ ಅಂಟಾವಾ ಹಾಡು ಅದ್ಯಾವ ಪರಿ ಹಿಟ್ ಆಗಿದೆಯೆಂದರೆ ಎಲ್ಲರ ಬಾಯಲ್ಲೂ ಇದೆ ಹಾಡು ಗುನುಗುತ್ತಿದೆ. ಬಿಡುಗಡೆಯಾಗಿರುವ ಐದು ಭಾಷೆಗಳಲ್ಲೂ ಈ ಹಾಡು ಹಿಟ್ ಆಗಿದೆ.
ಈ ಹಾಡಿಗೆ ಕೋರಿಯೋಗ್ರಫಿ ಮಾಡಿರುವುದು ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ. ಸಮಂತ ಹಾಡಿನಲ್ಲಿ ಮಾದಕವಾಗಿ ಕುಣಿದಿದ್ದರೆ, ಅಲ್ಲು ಅರ್ಜುನ್ ಸಾಥ್ ನೀಡಿದ್ದಾರೆ. ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡುವಾಗಿನ ಒಂದು ತುಣುಕನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗಣೇಶ್ ಮತ್ತು ಅವರ ಡ್ಯಾನ್ಸ್ ಪಾರ್ಟನರ್ ಸ್ಟೆಪ್ಸ್ ಕಂಪೋಸ್ ಮಾಡುವುದನ್ನ ನೋಡಿ ಸಮಂತಾ ಮತ್ತು ಅಲ್ಲು ಅರ್ಜುನ್ ಮನಸಾರೆ ನಕ್ಕಿದ್ದಾರೆ. ಇಬ್ಬರು ನಟರು ಅವರ ಕ್ರಿಯೆಟಿವಿಟಿಯನ್ನ ಮೆಚ್ಚಿದ್ದಾರೆ. ಸಮಂತ ಗಣೇಶ್ ಅವರಿಗೆ ವಾಹ್ ಕಮಾಲ್ ಮಾಸ್ಟರ್ ಎಂದು ಹೊಗಳಿದ್ದಾರೆ.
ನನ್ನ ನೆಚ್ಚಿನ ಕೋರಿಯೋಗ್ರಾಫಿಗಳ್ಲಿ ಮತ್ತೊಂದು ಹಿಟ್ ಅಲ್ಲು ಅರ್ಜುನ್ ಮತ್ತು ಸಮಂತಾ ಜೊತೆ ಕಳೆದ ಅತ್ಯಂತ ಮೋಜಿನ ಸಮಯ ಎಂದು ಗಣೇಶ್ ಆಚಾರ್ಯ ಅವರು ಬರೆದುಕೊಂಡಿದ್ದಾರೆ.
https://www.instagram.com/reel/CYzC2TWqPuw/?utm_medium=copy_link








