ಜಾಗರೂಕತೆಯಿಂದ ರೂಪಿಸಿಕೊಂಡಿದ್ದ ಯೋಜನೆಗಳು ನಾಶವಾಗಿದೆ : ಸಮಂತಾ
ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ಮತ್ತು ನಾಗಚೈತನ್ಯ ಕೆಲ ದಿನಗಳ ಹಿಂದೆ ಡಿವೋರ್ಸ್ ಪಡೆಯುವ ಮೂಲಕ 10 ವರ್ಷದ ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಈಗ ಅವರವರ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ.. ಈ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ದೊಡ್ಡ ಆಘತವೇ ಆಗಿತ್ತು..
ಆದ್ರೆ ಸಮಂತಾ ನಾಗಚೈತನ್ಯ ಈ ಬಗ್ಗೆ ಮೌನವಾಗಿಯೇ ಇದ್ರು.. ಇದೀಗ ಸ್ಯಾಮ್ ತಮ್ಮ ವಿಚ್ಛೇದನದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ಧಾರೆ.. ಬಾಲಿವುಡ್ ವೆಬ್ ಸೈಟ್ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಂತಾ ರುಥ್ ಪ್ರಭು 2021ರಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳ ಬಳಿಕ ನನಗೆ ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ. ಯಾಕೆಂದರೆ, ನಾನು ಜಾಗರೂಕತೆಯಿಂದ ರೂಪಿಸಿದ ಯೋಜನೆಗಳೆಲ್ಲಾ ನಾಶವಾಗಿದೆ. ನನ್ನ ಭವಿಷ್ಯದಲ್ಲಿ ಮುಂದೆ ಏನೇನು ಇದೆಯೋ ಅದಕ್ಕೆ ನಾನು ಮುಕ್ತವಾಗಿದ್ದೇನೆ. ನಾನು ಅತ್ಯುತ್ತಮವಾದುದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಅಷ್ಟೇ’ ಎಂದಿದ್ದಾರೆ.
ಅಲ್ಲದೇ ‘ ವಿಚ್ಛೇದನ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ. ಒಂಟಿತನವೇ ಈ ನೋವಿನಿಂದ ಹೊರಬರಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮಾಡುತ್ತಿರುವ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ, ನಿಮಗೆ ವಚನ ನೀಡುತ್ತೇನೆ. ಇದೆಲ್ಲವೂ ನನ್ನನ್ನು ಕುಗ್ಗಿಸಲು ನಾನು ಬಿಡುವುದಿಲ್ಲ.’ ಎಂದು ಮನದ ನೋವು ಹೊರಹಾಕಿದ್ದಾರೆ..








