ಸಮನ್ವಿ ಅಸ್ತಿ ವಿಸರ್ಜನೆ Saaksha Tv
ಮಂಡ್ಯ: ಮೊನ್ನೆ ಬೆಂಗಳೂರಿನ ಕೋಣನಕುಂಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ತೀರಿಹೋಗಿದ್ದರು. ಇಂದು ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ತಿ ವಿಸರ್ಜನಾ ಕಾರ್ಯ ನಡೆಯಿತು.
ಸಮನ್ವಿ ತಂದೆ ರೂಪೇಶ ನಾಯ್ಡು, ಖ್ಯಾತ ವೈದಿಕ ಬಾನುಪ್ರಕಾಶ ಶರ್ಮ ಅವರ ನೇತೃತ್ವದಲ್ಲಿ ಅಸ್ತಿ ವಿಸರ್ಜನಾ ಕಾರ್ಯ ನೆರೆವೇರಿಸಿದರು. ತಿಲ ತರ್ಪಣ, ನಾರಾಯಣ ಬಲಿ, ಪಿಂಡ ಪ್ರಧಾನ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನಡೆದವು. ಈ ಕಾರ್ಯದಲ್ಲಿ ಅಜ್ಜ ನಾರಾಯಣ ಸ್ವಾಮಿ ಮತ್ತು ಕಾಳಿ ಮಠದ ರಿಷಿಕುಮಾರ ಸ್ವಾಮಿಜಿ ಭಾಗಿಯಾಗಿದ್ದರು.








