ಶಾರುಖ್ ಖಾನ್ ಪುತ್ರನ ಬಂಧಿಸಿದ ಅಧಿಕಾರಿಗೆ ಜೀವ ಭಯ
ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನ ಡ್ರಗ್ ಕೇಸ್ ನಲ್ಲಿ ಬಂಧಿಸಿದ ಅಧಿಕಾರಿಗೆ ಇದೀಗ ಜೀವ ಭಯ ಶುರುವಾಗಿದೆ. ಹೌದು ಆರ್ಯನ್ ಖಾನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಆತನನ್ನ ಬಂಧಿಸಿದ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ ವಾಂಖೆಡೆ ರಾಜಕೀಯ ಒತ್ತಡಕ್ಕೆ ಸಿಲುಕಿ ಆರ್ಯನ್ ಅನ್ನು ಬಂಧಿಸಿದ್ದಾರೆ ಎಂದು ಕೆಲವರು ಆರೋಪ ಮಾಡ್ತಾಯಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಈಗ ವಾಖಂಡೆ ಅವರಿಗೆ ಜೀವ ಭಯ ಶುರುವಾಗಿದೆ. ಕೆಲವರು ವಾಖಂಡೆ ಅವರನ್ನ ಎಲ್ಲಿಗೇ ಹೋದ್ರೂ ಫಾಲೋ ಮಾಡ್ತಾಯಿದ್ದಾರಂತೆ. ಇಬ್ಬರು ವಾಖಂಡೆ ಅವರನ್ನ ಎಲ್ಲ ಕಡೆ ಫಾಲೋ ಮಾಡ್ತಿರೋದು ವಾಖಂಡೆ ಅವರ ಗಮನಕ್ಕೆ ಬಂದಿದ್ಯಂತೆ. ಈ ಬಗ್ಗೆ ವಾಖಂಡೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇನ್ನೂ ವಾಖಂಡೆ ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಹೋಗಿದ್ದಾಗಲೂ ಅಲ್ಲಿಗೂ ಫಾಲೋ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ವಾಖಂಡೆ ಅವರನ್ನ ಫಾಲೋ ಮಾಡ್ತಿದ್ದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.